STORYMIRROR

Lakshmi Kanth L V

Inspirational Others

4  

Lakshmi Kanth L V

Inspirational Others

ಹನಿ ಜಾರದಿರಲಿ

ಹನಿ ಜಾರದಿರಲಿ

1 min
137


ಬೊಗಸೆ ಕಣ್ಣಿಂದ ಹನಿ ಜಾರದಿರಲಿ ಕಂದ

ಕೋಟಿ ಕನಸುಗಳು ಕರಗಿ ಹೋದಾವು..


ಬಡತನ ಸಿರಿತನ ಯಾವುದು ಶಾಶ್ವತವಲ್ಲ

ಕಾಲಚಕ್ರದ ಉರುಳು ಮತ್ತೆ ತಿರುಗೀತು..


ನೋವು ನಿನ್ನದಲ್ಲ ಹಣವಂತನ ಅಹಂಕಾರ

ಅವನ ನಲಿವು ನಿನಗೂ ಒಮ್ಮೆ ಬಂದೀತು..


ನಿನ್ನ ಕಂಗಳ ಕಾಂತಿಗೆ ಸೂರ್ಯನೇ ಕರಗುವನು

ಇನ್ನು ಬಡತನದ ಬೇಗೆ ಕರಗದೆ ಉಳಿದೀತೆ..


ಅಳುವಿರದ ಮೊಗವೇ ನಿನಗೆ ಅಂದ ಚೆಂದ

ನಗುವಿನ ಒಡವೆಯೇ ನಿನಗೆ ಸದಾ ಸಿರಿಗಂಧ..


ಹನಿ ಜಾರದಿರಲಿ ನಿನ್ನ ಕಣ್ಣು ಬಾಡದಿರಲಿ

ಮತ್ತೆ ನಿನ್ನ ಕನಸುಗಳು ಕರಗಿ ಹೋದಾವು...


Rate this content
Log in

Similar kannada poem from Inspirational