ಕನ್ನಡವಿದು ನಮ್ಮ ಕನ್ನಡ
ಕನ್ನಡವಿದು ನಮ್ಮ ಕನ್ನಡ
ಬ್ರಾಹ್ಮೀ ಲಿಪಿಯಿಂದ ರೂಪುಗೊಂಡ ಕನ್ನಡ
ಸಾವಿರದ ಐದುನೂರು ವರುಷಗಳಿರುವ
ಚರಿತ್ರೆಯ ಮಾದರಿಯುಳ್ಳ ನಮ್ಮ ಈ ಕನ್ನಡ
ಬಾದಾಮಿ ಚಾಲುಕ್ಯರ ಸಂಸ್ಕೃತದ ಕನ್ನಡ!!
ರಾಷ್ಟ್ರಕೂಟ ಸಾಮ್ರಾಜ್ಯದ ಹಳಗನ್ನಡ
ತನ್ನದೇ ಲಿಪಿಯ ಹೊಂದಿರುವ ನಡುಗನ್ನಡ
ವಿನೋಬಾ ಬಾವೆ ಹೊಗಳಿದ ಲಿಪಿಗಳ ರಾಣಿ ಕನ್ನಡ
ಹಲ್ಮಿಡಿ ಶಾಸನದಲಿ ಪ್ರಾರಂಭಿಕ ರೂಪ ಕನ್ನಡ!!
ಕಲ್ಯಾಣ ಚಾಲುಕ್ಯರ ಆಳ್ವಿಕೆಯ ಕನ್ನಡ
ಹೊಯ್ಸಳ ಸೇವುಣರ ಆಡಳಿತ ಕನ್ನಡ
ಧಾರ್ಮಿಕ ಮಹಾಕಾವ್ಯದ ಆದಿಪುರಾಣ ಕನ್ನಡ
ವಿಜಯನಗರ ಸಾಮ್ರಾಜ್ಯದ ಸುವರ್ಣ ಕನ್ನಡ!!
ಮಧ್ವ ಸಂತರ ಸರಳ ರೂಪದ ಕನ್ನಡ
ಪ್ರಾದೇಶಿಕ ಭಾಷೆಯ ಶಬ್ಧಕೋಶ ಕನ್ನಡ
ಭಾರತದ ಪುರಾತನ ಭಾಷೆಗಳಲ್ಲೊಂದು ಕನ್ನಡ
ಸಾವಿರಾರು ಇತಿಹಾಸವುಳ್ಳ ನಮ್ಮ ಕನ್ನಡ!!
ಕದಂಬರ ಬನವಾಸಿಯಲ್ಲಿನ ಆಳ್ವಿಕೆ ಕನ್ನಡ
ಸಾಮ್ರಾಟ ಅಶೋಕನ ಕಾಲದ ಭಾಷೆ ಕನ್ನಡ
ಅಕ್ಕಮಹಾದೇವಿಯ ಭಕ್ತಿ ಸಾಹಿತ್ಯ ಕನ್ನಡ
ರಾಮಾಯಣ ಮಹಾಭಾರತದ ಪುರಾಣ ಕಾವ್ಯ ಕನ್ನಡ!!
ದಾಸರ ಪದಗಳ ದೇವರ ನಾಮಗಳು ಕನ್ನಡ
ಹದಿನೆಂಟನೇ ಶತಮಾನದ ಜನಪದ ಕಾವ್ಯ ಕನ್ನಡ
ಕವಿ ಕೋಗಿಲೆಗಳು ಹರಿಸಿದ ಕಾವ್ಯಲಹರಿ ಕನ್ನಡ
ನಾವು ನೀವು ಮಾತನಾಡುವ ನುಡಿ ಕನ್ನಡ!!
ಉಳಿಸಬೇಕು ನಾವಿಂದು ಜೊತೆಗೂಡಿ ಕನ್ನಡ
ಬೆಳೆಸಬೇಕು ಎಲ್ಲಾರು ಒಟ್ಟಾಗಿ ಕನ್ನಡ
ನಾಡು ಉಳಿಯಬೇಕೆಂದರೆ ಭಾಷೆ ಉಳಿಯಬೇಕು
ಭಾಷೆ ಉಳಿಯಬೇಕೆಂದರೆ ಮೀಸಲೀಡಬೇಕು ಜ್ಞಾನ!!
ಬರಿ ಬಾಯಿಯಿಂದ ಉಳಿಸಿ ಬೆಳೆಸಿರೆಂದು
ಅಬ್ಬರಿಸಿದ ಮಾತ್ರಕ್ಕೆ ಉಳಿಯದು ಕನ್ನಡ
ಬಳಸಿದರೆ ಉಳಿದೀತು ಕನ್ನಡ
ಪ್ರೀತಿಸಿದರೆ ಬೆಳೆದೀತು ಕನ್ನಡ!!