ಸಹಜ ಕನ್ನಡಿಗ
ಸಹಜ ಕನ್ನಡಿಗ


ಹಮ್ಮಿಲ್ಲ, ಬಿಮ್ಮಿಲ್ಲ
ಹೆಮ್ಮೆ ಒಳಗೆಲ್ಲೋ
ಇರಬಹುದು.
ಸಹಜವಾಗಿ, ಸರಳವಾಗಿ
ನಾನು ಕನ್ನಡಿಗ
ಅಷ್ಟೇ
ಗರಿಮೆಯಿಲ್ಲ, ಗರ್ವವಿಲ್ಲ
ಕೀಳರಿಮೆ ಇಣುಕುವದಿಲ್ಲ
ಸುಲಲಿತವಾಗಿ ಹೊರಡುವ ನನ್ನ
ಸ್ವರ ಉಲಿಯುವುದು
ನಾನು ಕನ್ನಡಿಗ
ಅಷ್ಟೇ
ಭುಜಬಲ ಪರಾಕ್ರಮಗಳಿಲ್ಲ
ಗುಲಾಮಗಿರಿಯ ಸೋಂಕಿಲ್ಲ
ಸ್ವತಂತ್ರ ಸ್ವಚ್ಚಂದ ಮನ
ತಾನೇ ತಾನಾಗಿ ಅರಳುವುದು
ನಾನು ಕನ್ನಡಿಗ ಎಂದಾಗ
ಅಷ್ಟೇ.