ಜೋಡೆತ್ತಿನ ಗಾಡಿ
ಜೋಡೆತ್ತಿನ ಗಾಡಿ


ಜೀವನವೇ ಒಂದು
ಜೋಡೆತ್ತಿನ ಗಾಡಿ
ಸತಿಪತಿ ಎತ್ತುಗಳಾದರೆ
ಗಾಲಿ ಮಕ್ಕಳು ನೋಡಿ
ಗಾಡಿಯ ವೇಗದ ಮಿತಿ
ಏರುಪೇರಾದಾಗ
ಗಾಲಿಗಳ ಓಟದ ರೀತಿ
ಬದಲಾಗುತ್ತೆ ಆಗ
ಎತ್ತಿನ ಮೇಲಿನ ಪ್ರೀತಿ
ಎತ್ತಲೋ ತಿರುಗುತ್ತೆ
ಕಾಡಿ ಬೀಳುವ ಭೀತಿ
ಎಲ್ಲೆಲ್ಲೊ ಗಾಡಿ ನಿಲ್ಲುತ್ತೆ
ಆ ಮೇಲಿನವನ ಆಟ
ಈ ಜೀವನ ಗಾಡಿಯ ಓಟ