ದೀಪಾವಳಿ
ದೀಪಾವಳಿ
ಸಂವತ್ಸರಗಳು ಉರುಳುತಾ ಉರುಳುತ
ಕಾಲಚಕ್ರವು ನಿಲ್ಲದೇ ತಿರುಗುತಿದೆ
ಸೊಬಗಲಿ ಹಬ್ಬದ ಬೆಳಕನು ಚೆಲ್ಲಿದೆ
ದೀವಳಿಗೆಯ ಬೆಳಕಿನ ಕಿರಣ
ಮನೆ ಮನಸುಗಳ ಸೋಕಿದೆ
ಸಂತೋಷದ ತಳಿರು ತೋರಣ
ಸದ್ಭಾವನೆಯ ರಂಗವಲ್ಲಿ
ಹರುಷವ ಚೆಲ್ಲಲಿ ಮನದಲ್ಲಿ
ಮುದವನು ಹರಡಲಿ ಮನೆಯಲ್ಲಿ
ಗ್ರಹಣದ ಗ್ರಹಣದ ಅರಿವಿನಲಿ
ಹಾಕುವ ಹೆಜ್ಜೆಗೆ ಲಯವಿರಲಿ
ಶುಭವನು ಕೋರುವ ಸಂಪ್ರದಾಯವು
ಹಸಿರಾಗಿರಲಿ ಬದುಕಿನಲಿ
ನಿಮ್ಮ ಗುರಿಗಳು ಫಲಿಸಲಿ
ಗೆಲುವಲಿ ನಡೆಸಲಿ ಈ ದೀಪಾವಳಿ
