Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Ranjitha Ranju

Inspirational Others

4.7  

Ranjitha Ranju

Inspirational Others

ಭಾವವೊಂದೇ....ಭಾಷೆ ಹಲವು

ಭಾವವೊಂದೇ....ಭಾಷೆ ಹಲವು

1 min
259



ಒಮ್ಮೆ ಶಾಲೆಯಲ್ಲೇ ಮುಟ್ಟಾದಾಗ

ಗೆಳತಿ ಸಂಶೀನ ಕೊಟ್ಟ ಪ್ಯಾಡಿಗೆ ಇರದ 

ಜಾತಿ ಮುದ್ರೆ ಮಂದಿರ, ಮಸೀದಿ, 

ಚರ್ಚುಗಳಿಗೇಕೆ?


ಪರೀಕ್ಷೆಯಲ್ಲಿ ಶಾಯಿ ಖಾಲಿಯಾಗಿ 

ಒದ್ದಾಡುವಾಗ ಲೇಖನಿ ನೀಡಿದ ಮೇರಿ

ಅಂದು ಸರಸ್ವತಿ ದೇವಿಯಾದಳು..


ಮೈದಾನದಲ್ಲಿ ಆಡುತ್ತಾ ಬಿದ್ದಾಗ 

ಭಾಗ್ಯ ಹಚ್ಚಿದ ಮುಲಾಮು,ಕಟ್ಟಿದ 

ಕರವಸ್ತ್ರ ಕೇಳಲಿಲ್ಲ ಜಾತಿ ಯಾವುದೆಂದು?


ರಂಜಾನ್. ಹಬ್ಬದ ಬಿರಿಯಾನಿ 

ಯುಗಾದಿಯ ಹೋಳಿಗೆ ತಿಂದ ನಾಲಿಗೆ 

ಕೇಳಲಿಲ್ಲ, ಅಲ್ಲಾ, ಏಸು, ಈಶ್ವರನ ಬಗ್ಗೆ


ಬುರ್ಖಾ, ಪ್ಯಾಂಟು, ಸೀರೆಯಾದರೇನು

ಕನ್ನಡ, ಕೊಂಕಣಿ ಹಿಂದಿಯಾದರೇನು

ವೇಷ-ಭಾಷೆ ಹಲವಾದರೂ ಭಾವವೊಂದೆ

ಭಾರತೀಯರು ನಾವು ಎಂದೂ ಒಂದೇ....


Rate this content
Log in

Similar kannada poem from Inspirational