ಹುಲ್ಲೆಯ ಸ್ವಗತ
ಹುಲ್ಲೆಯ ಸ್ವಗತ

1 min

185
ಸಾವು ಬೆನ್ನು ಹತ್ತಿದರೇನು ಹಿಂದೆ
ಜೀವಿಸುವ ಸಳೆತವಿದೆ ಮುಂದೆ
ಮೃತ್ಯು ದೈತ್ಯ ಕಾರನಾದರೇನು
ಪುಟ್ಟ ಬದುಕು ನನಗಿಲ್ಲವೇನು
ಹೋರಾಟವೇಕಿಲ್ಲ ಇಲ್ಲಿ ಸಮ ಬಲರೊಡನೆ
ಇದೆ ಏನು ಸೃಷ್ಟಿಯು ನ್ಯಾಯ
ಸಮತೋಲನೆ
ಜೀವಿ ಜೀವಿಗಳಲ್ಲೇಕೆ ಈ ಘೋರ ಸಂಘರ್ಷಣೆ
ಬಲಾಡ್ಯರ ಪಕ್ಷಪಾತಿಯೇ ನೀನು ಓ ಭಗವಂತನೇ
ಜೀವವೂ ನಿನ್ನದೆ ಅನ್ನವು ನಿನ್ನದೆ ನಿನಗೆ ಎಲ್ಲ ಅರ್ಪಣೆ
ಪ್ರಾಣವು ನಿನ್ನದೆ ಬದುಕು ನಿನ್ನದೆ ನಿನಗೆ ಎಲ್ಲ ದೂಷಣೆ
ಹುಟ್ಟಿಸಿದವ ನೀನೆ ನಿನದೇ ನ್ಯಾಯ ನಿರೂಪಣೆ
ಕಾಯ್ದವನು ನೀನೆ ಕೊಡು ಈ ಜೀವಕೆ ರಕ್ಷಣೆ
ಚಲುವನ ಕೊಟ್ಟು ನನಗೆ ಬಲವೇಕೆ ಕೊಡಲಿಲ್ಲ
ಬಲವನು ಕೊಟ್ಟು ಅವಗೆ
ಕರುಣೆ ಏಕೆ ಇಡಲಿಲ್ಲ
ವಾದ ಅಪವಾದಗಳ ಗೊಡವೆ
ನಿನಗಿಲ್ಲಿ ಇಲ್ಲ
ಇದು ಈ ಹುಲ್ಲೆಯ ಸ್ವಗತ ಬರೀ
ಪದಪುಂಜವಲ್ಲ