ಪಯಣ
ಪಯಣ

1 min

227
ಜೀವನ ಒಂದು ರೈಲು ಪಯಣ
ಹಲವರು ನಮ್ಮೊಂದಿಗೆ ಇದ್ದು
ತಮ್ಮ ನಿಲ್ದಾಣ ಬಂದೊಡನೆ
ತಿಳಿಸದೇ ಇಳಿದು ತೆರಳುತ್ತಾರೆ
ಕೆಲವರು ಆತ್ಮೀಯರಾಗಿ
ಮೊದಲೋ ಇಲ್ಲ ನಂತರ
ಹೇಳದೆ ಇಳಿದುಬಿಡುತ್ತಾರೆ
ಪಯಣವಂತು ನಿರಂತರ
ಟಿಕೆಟ್ ತಪಾಸಣೆ ಮಾಡಿ
ಬಿಡದೆ ಇಳಿಸುವವನೇ ಯಮ
ನಿಲ್ದಾಣದಲ್ಲಿ ಕ್ಷಣ ನಿಂತರು
ಪಯಣ ನಿಲ್ಲದು ಇದೇ ನಿಯಮ