STORYMIRROR

Aruna Gireesh Balaganur

Classics Inspirational Others

4  

Aruna Gireesh Balaganur

Classics Inspirational Others

ಅಮ್ಮ(ಕಾವ್ಯ)

ಅಮ್ಮ(ಕಾವ್ಯ)

1 min
647

 ಜನಿಸುವ ಮುನ್ನವೇ ಮಗುವಿನ ಮೇಲೆ ಪ್ರೀತಿ, 

ಜನಿಸುವುದು ಅಮ್ಮನಿಗೆ ಮಾತ್ರ,

ನೀನೊಂದು ಪರಿಶುದ್ಧ ಪ್ರೀತಿಯ ಪಾತ್ರ,

ದ್ವೇಷ, ಅಸೂಯೆ, ಸುಳಿಯದು ನಿನ್ನ ಹತ್ತಿರ.


ನಿನ್ನ ಹೆಸರೇ ದೇವರ ಸ್ತೋತ್ರ,

ನನ್ನ ಬಾಲ್ಯ ನಿನ್ನ ಕಣ್ಣಲ್ಲೇ ಕಂಡಿರುವೆ,

ನನ್ನ ಆಟ, ಪಾಠ, ತುಂತಾಟ ನಿನ್ನ ಬಾಯೆಲ್ಲೆ ಕೇಳಿರುವೆ,

ನನ್ನ ಮನದ ಮಾತನ್ನು ನಿನ್ನಲ್ಲೇ ಹೇಳಿರುವೆ,

ನನ್ನೆಲ್ಲ ಕಷ್ಟ ಸುಖಗಳಲ್ಲೂ ನೀನಿರುವೆ.


ನಾ ಪ್ರೀತಿಸಿದ ಪ್ರೀತಿಗಳಲ್ಲಿ ನೀನೇ ಮೊದಲು,

ಅರ್ಥಮಾಡಿಕೊಂಡೆ ನನ್ನ ನುಡಿ ತೊದಲು,

ಬಾಳೆಂಬ ತೋಟದಲ್ಲಿ ಬೀಜ ಬಿತ್ತಿದೆ ಪ್ರೀತಿ ಹರವಲು,

ನೀನಿರೆ ಕಾಣುವುದಿಲ್ಲ ಕವಲು.


ನೀನು ಪ್ರೀತಿ ಕಾಳಜಿ, ನಿಸ್ವಾತ್ರದ ಸೆಲೆ,

ನಿನ್ನ ಸೆಳೆತ ಸೆವಂತೆಯ ಪಕಳೆ,

ನನ್ನ ಬದಕು ಚಿತ್ರದಲ್ಲಿ ನೀನು ಪ್ರೀತಿ ಎಳೆ,

ನಿನ್ನೊಂದು ಒಳ್ಳೆಯವಳೇ.


ಅಮ್ಮ ನಿನ್ನಷ್ಟು ಪ್ರೀತಿಸುವ ಜೀವ ನಾ ಕಂಡಿಲ್ಲ,

ನಿನ್ನ ಶಾಂತ ಸ್ವಭಾವಕ್ಕೆ ಮೇರೆ ಇಲ್ಲ,

ನಿನ್ನ ಮತ್ತಿನ್ನಲ್ಲಿರುವದು ಬರೀ ಬೆಲ್ಲ,

ನನಗೆ ಧಾರೆಯೆರದ್ದಿಯಾ ನಿನ್ನ ಅಕ್ಕರೆನ್ನೆಲ್ಲ.


ನೀನಿದ್ದೀಯಾ ನನಗೆ ತ್ಯಾಗದ ಜೀವವಾಗಿ,

ನನ್ನ ಹೆಸರಿದೆ ನಿನ್ನ ಉಸಿರಿನ ಭಾಗವಾಗಿ,

ನಿನ್ನ ಋಣ ತೀರಿಸಲಾಗದು ಮಗಳಾಗಿ,

ಬದುಕಲೇಬೇಕು ನೀನು ನೂರು ವರುಷ ನನಗಾಗಿ.

                           


 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics