STORYMIRROR

Ranjitha Ranju

Tragedy Inspirational Others

4  

Ranjitha Ranju

Tragedy Inspirational Others

ಹೊತ್ತೊಯ್ಯುವುದೇನಿದೆ?

ಹೊತ್ತೊಯ್ಯುವುದೇನಿದೆ?

1 min
267


ಹತ್ತುರಿಯುವ ಈ ಒಡಲಿಗೆ

ಹೊತ್ತೊಯ್ಯುವುದೇನಿದೆ?

ಒಂಟಿತನದಿ ಹೊರಡಲು

ಅಹಂ,ಅಸೂಯೆಯದೇಕೆ?

ಬೆತ್ತಲಾಗಿ ಹೋಗಲು

ದುರ್ಮಾರ್ಗವೇಕೆ?

ಖಾಲಿ ಕರದಿ ತೆರಳಲು

ಕೂಡಿಡುವ ಕಪಟತನವೇಕೆ?

ಸುಟ್ಟು ಬೂದಿಯಾಗಲು

ಸಂಪತ್ತು, ಅಧಿಕಾರವೇಕೆ?

ಮಣ್ಣಾಲ್ಲಿ ಮಣ್ಣಾಗಲು

ಜಾತಿ, ಧರ್ಮ, ಮತಬೇಕೆ?

ವಿದಾಯದ ಬದುಕಲಿ

ದಾಯಾದಿ ದುಷ್ಟತನವೇಕೆ?

ಮೂರು ದಿನದ ಬಾಳಿಗೆ

ಬಡಿದಾಟ,ಬಯಲಾಟ ಬೇಕೆ?

ಹುಸಿತನದ ಉಸಿರಿದು

ಸ್ವಾರ್ಥ,ಸಿಡುಕುತನವೇಕೆ?

ಬಾರರು ನಮ್ಮೊಂದಿಗೆ

ಬಂದಾರು ಗುಣಿವರೆಗೆ,

ಕಲಿಬೇಕು ಸದ್ಗುಣ

ಸಂಪಾದಿಸು ನಾಲ್ಕು ಜನ

ಹೊತ್ತೊಯ್ಯಲಾದರೂ

ಅತ್ತು ಕರೆಯಲಾದರೂ

ನಾಕಾರು ದಿನ ಅಳಿಯದೆ

ನೆನಪಾಗಿ ಉಳಿಯಲಾದರೂ...




Rate this content
Log in

Similar kannada poem from Tragedy