STORYMIRROR

Ranjitha Ranju

Fantasy Inspirational Thriller

4  

Ranjitha Ranju

Fantasy Inspirational Thriller

ನನ್ನ ದೇಶ

ನನ್ನ ದೇಶ

1 min
268

 ಸಾವಿರದ ನೆನಪು

ಸದಾ ಭರತಮಾತೆಯ ಕಾಯುವ ಅನುಯಾಯಿ

ಅರಿಯ ಶಿರವ ಧರೆಗುರುಳಿಸುವ ಶಿಸ್ತಿನ ಸಿಪಾಯಿ

ವಾತ್ಸಲ್ಯ ಬಿಟ್ಟು ನನ್ನ ದೇಶವೆಂಬ ಒಲವು ತೊಟ್ಟು ಹುಟ್ಟಡಗಿಸುವ ನಿಮ್ಮ ಸಮರ ನೀತಿಗೆ ನನ್ನ ಅನಂತ ನಮನಗಳು!!

ಹೊಗಳಲು ಪದಗಳಿಲ್ಲ,ಹೊಗೆಯಾಡುತ್ತಿದೆ ನಿಮ್ಮ ಹೋರಾಟದ ಕಿಡಿ ಇಂದಿಗೂ ಕಾರ್ಗಿಲ್ ನಲ್ಲಿ,

ಹುತಾತ್ಮ ಯೋಧರೆ ದೇಶಕ್ಕಾಗಿ ದೇಹ ತೊರೆದ ನಿಮ್ಮ ಹಿಮಗಟ್ಟಿದ ಪಾದಗಳಿಗೆ ನನ್ನ ಅನಂತ ನಮನಗಳು!!

ಹೆತ್ತವಳ ಹಸಿವಿನ ಹರಕೆ,ಮಡದಿಯ ಅಶ್ರುವಿನ ಅರಿಕೆ

ರಾಶಿ ರಾಶಿ ರಾತ್ರಿಗಳ ರಣರಂಗದಲ್ಲಿ ಹೂತಿಟ್ಟು

ಕೋಟಿ ಕಂಗಳ ಸುಖನಿದ್ರೆಗೆ ಅಧಿಪತಿಗಳಾದ

ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ಅನಂತ ನಮನಗಳು!!

ಮನೆಗೆ ಮರಳುವುದೇ ಕನಸಾಗಿ ಉಳಿದರೂ

ಸಾವಿರ ಕನಸುಗಳ ಹೊತ್ತಿಗೆಯ ಹೊತ್ತು ಬಂದು

ಸ್ವಾರ್ಥ ತೊರೆದು,ಸಾವಲ್ಲೂ ಸಾರ್ಥಕತೆ ಮೆರೆದ

ಸಾವಿರದ ನಿಮ್ಮ ನೆನಪಿಗೆ ನನ್ನ ಅನಂತ ನಮನಗಳು!!

ಯೋಧನಿಂದ ರಾರಾಜಿಸಿದ ತಿರಂಗ ಧ್ವಜವದು

ಹೊದಿಕೆಯಾಗುವ ಪುಣ್ಯ ಪಡೆದಿರಿ ವೀರಮರಣದಿ

ಹಗಲಿರುಳು ಪೊರೆದು,ಸರ್ವಸ್ವವ ತ್ಯಾಗ ಮಾಡಿದ

ನಿಮ್ಮ ಅನವರತ ಶ್ರಮಕ್ಕೆ ನನ್ನ ಅನಂತ ನಮನಗಳು!!

ವೀರಯೋಧರು ಹುತಾತ್ಮರಲ್ಲ ಎಂದಿಗೂ ಮಹಾತ್ಮರು

ಮೇಣದಬತ್ತಿ ಹೊತ್ತಿಸಿ ಕರಗಿಸಲು ಸಾಮಾನ್ಯರಲ್ಲ ನೀವು

ಕಾದು ಹಣ್ಣಾದ ನಿಮ್ಮ ಕುಟುಂಬ ಕಾಯಬೇಕಿದೆ ನಾವು,

ನಿಮ್ಮ ಬಲಿದಾನಕ್ಕಾಗಿ ನನ್ನ ಅನಂತಾನಂತ ನಮನಗಳು!!



Rate this content
Log in

Similar kannada poem from Fantasy