ಮೂಕಜ್ಜಿ ಕಂಡ ಭಾರತ
ಮೂಕಜ್ಜಿ ಕಂಡ ಭಾರತ
ಸೀತಾ- ಆಮಿನಾರ ಸೌಹಾರ್ದತೆಯ ಬಂಧವೂ
ದಸರಾ-ಈದ್ ಹಬ್ಬಗಳಲ್ಲಿ ಕುಮಾರ-ರಹೀಮರ ಹಸ್ತ್ರವೂ
ಸಿಹಿ-ಉಪಹಾರಗಳೊಂದಿಗೆ ಸ್ನೇಹ ಸಮಾದಾನದ ಹಂಚಿಕೆ
ಊರ ಜನರಿಗೆ ಕುಡಿಯಲು ನೀರಿಗಿದ್ದ ಒಂದೇ ಮಡಿಕೆ
ರೈತರಲ್ಲಿ ಹಿಂದು-ಮುಸ್ಲಿಮರ ಗಾನವ ಹಾಡುತ್ತಾ ಉಲುಮೆ
ಸರಿಗಮ ರಾಗದಿ ಆಡಿದ ಜನಪದ ಗೀತೆಗಳ ಮಹಿಮೆ
ಕೈಲಾಸದಲ್ಲಿ ಪರಸ್ಪರ ಚರ್ಚೆ ಮಾಡುವುದರಲ್ಲಿ ನಂಬಿಕೆ
ದೈವಸ್ಥಾನ-ಮಸೀದಿ ಕಟ್ಟುವ ಪೂಜಾರ-ಹಾಜರರ ಕೊಡುಗೆ
ಕೈ ಜೋಡಿಸಿ ಕೌಶಿಕ್-ಆಶಿಕರು ಶಾಲೆಗೆ ಸಾಗುತ್ತಿದ್ದ ಸಾಲು
ಶ್ರೀಮಂತ-ಬಡತನ ವೆಂಬ ಪದವಿಲ್ಲದ ಆ ಕಾಲ
ನೆನೆಯಲು ಕಣ್ಣಿರು ಕಾಯುವುದು ಅನಂದಾಶ್ರುವಾಗಲು
ಕೊನೆಯಲ್ಲಿ ಇದೇನಾಯಿತು ಮೂಕಜ್ಜಿ ಕಂಡ ಭರತ ನಾಡಲಿ.
ಮತಾಂತರ, ಹಿಜಾಬ್, ವ್ಯಕ್ತಿಗಳ ವಿಮರ್ಶನೆಯ ಗೋಲು
ಪ್ರತಿಭಟನೆ ನಿಲ್ಲದ ಕಾನೂನಿನ ಅದಲು-ಬದಲು
ವಿದ್ಯೆಗಳಿಗೆ ಬೆಲೆ ಕೊಡದ ಅಗ್ನಿ ಉರಿಸುವ ಅಗ್ನಿಪತ್
ಸಂವಿಧಾನದಲ್ಲಿದ್ದದನ್ನು ತಿಳುವಳಿಕೆ ಮಾಡುವ ರೂಪ
ಜನಸಮಾನ್ಯರೆಡೆಯಲ್ಲಿ ಧರ್ಮಗಳ ಘರ್ಜನೆ
ಕೇಸರಿ-ಕಪ್ಪು ಎಂಬ ವಸ್ತ್ರಗಳ ನಡುವಿನ ಘರ್ಷಣೆ.
ಪಠ್ಯ-ಪರಿಷ್ಕರಣೆ ಎಂಬ ಹೆಸರಿನಲ್ಲಿ ಹಿಂದು ರಾಷ್ಟ್ರ ಶಿಲಾನ್ಯಾಸ
ವಿದ್ಯಯಿಲ್ಲದೆ ಬದಲಾಯಿಸುವಾಗ ಅವರಿಗಿಲ್ಲವೆ ಅವಮಾನ
ರೈತರಿಗಿಲ್ಲ ಅವರ ಬೆಳೆಗಳ ಸೂಕ್ತವಾದ ಬೆಲೆ
ಅತ್ಮಹತ್ಯೆಗಳಿಗಿಲ್ಲ ಬೆಳೆಬಾಲುವ ಆತ್ಮಗಳ ಲೆಕ್ಕಾಚಾರ
ಸೌಹಾರ್ದತೆಯ ಪುಟಗಳು ಹರಿದು ಸ್ವರಾಷ್ಟ್ರದ ಪುಟಗಳು
ಮುಚ್ಚಲಾಯಿತೇ ಮೂಕಜ್ಜಿ ಕಂಡ ಭಾರತದ ಬಾಗಿಲು..
