ಅ ಇಂದ ಅಃ ಬಣ್ಣದ ಹಾಡು
ಅ ಇಂದ ಅಃ ಬಣ್ಣದ ಹಾಡು
ಅಮ್ಮನ ಕೈ ತುತ್ತಲಿ ಕಂಡೆ ಒಲವಿನ ಬಣ್ಣ
ಆಟವಾಡುವ ಕಂದನ ಕೈಗಳಲಿ ತುಂಟಾಟದ ಬಣ್ಣ
ಇಷ್ಟಪಟ್ಟು ಮಾಡಿದ ಕೈ ಕೆಲಸದಲಿ ದೈವಿಕ ಬಣ್ಣ
ಈಜಿ ದಡ ಸೇರಿದಾಗ ಕೈಯಲಿ ಗೆಲುವಿನ ಬಣ್ಣ
ಉಳುಮೆ ಮಾಡುವ ರೈತನ ಕೈಯಲಿ ಪರಿಶ್ರಮದ ಬಣ್ಣ
ಊಟ ಬಡಿಸುವ ಕೈಯಲಿ ವಾತ್ಸಲ್ಯದ ಬಣ್ಣ
ಋತುವಿನ ಬದಲಾವಣೆಯಲಿ ದೇವರ ಕೈ ಚಳಕದ ಬಣ್ಣ
ಎಳೆಯ ಬಿಸಿಲು ಕೈ ಮೇಲೆ ಬಿದ್ದಾಗ ಸೂರ್ಯ ರಶ್ಮಿಯ ಬಣ್ಣ
ಏನಿಲ್ಲದ ಬರಿಗೈ ಬಡವನಲಿ ಹೃದಯ ಶ್ರೀಮಂತಿಕೆಯ ಬಣ್ಣ
ಐಶ್ವರ್ಯದ ಸಿರಿವಂತನ ಕೈಯಲಿ ಆಹಾಂಕರದ ಬಣ್ಣ
ಒಬ್ಬಂಟಿಯಾದ ಬದುಕಿನಲಿ ಖಾಲಿ ಆಯಿತು ಕೈ ಬಣ್ಣ
ಓಟದ ಜಗದಲಿ ಕಂಡೆ ಕೈ ತುತ್ತು ನೀಡಲು ಸಮಯ ಇಲ್ಲದ ಜನರ ಬಣ್ಣ
ಔದಾರ್ಯದ ಮನದಲಿ ಕೈ ತುಂಬ ನೀಡಿ ಹಾರೈಸುವ ಬಣ್ಣ
ಅಂಧನ ಕಣ್ಣಿನಲಿ ಕಂಡೆ ಕೈ ನೀಡಿ ಅವರು ಮುನ್ನಡೆಯುವ ಛಲದ ಬಣ್ಣ
ಅಃ ಈ ಬದುಕಿನಲಿ ಹಲವು ಕೈಗಳಲಿ ವಿಭಿನ್ನವಾದ
ಬಣ್ಣ
