ಅಪೂರ್ಣ ಅರ್ಥ
ಅಪೂರ್ಣ ಅರ್ಥ
ಕರಗದ ಮಂಜುಗಡ್ಡೆಗೆ
ಮರುಗದ ಮನಕೆ
ಕುದಿಯದ ಉಷ್ಣಾಂಶಕ್ಕೆ
ತೀರದ ಬಯಕೆಗಳಿಗೆ
ಕೊನೆ ಇಲ್ಲದ ವಿದಾಯಗಳಿಗೆ
ಶಾಂತಿ ಇಲ್ಲದ ಮೌನಕ್ಕೆ
ದನಿಯಾಗದ ಮಾತಿಗೆ
ಮುಗಿದರೂ ಉಳಿಯುವ ಮುಕ್ತಾಯಕ್ಕೆ
ಪೂರ್ಣ ವಿರಾಮದ ಮಧ್ಯಾಂತರಕ್ಕೆ
ಅರ್ಥಪೂರ್ಣವಾಗದ ಸತ್ಯ
