STORYMIRROR

Shilpashree NP

Classics Inspirational Others

4  

Shilpashree NP

Classics Inspirational Others

ತಾಯಿಯ ಮನದ ಬಣ್ಣ

ತಾಯಿಯ ಮನದ ಬಣ್ಣ

1 min
204

ಬಿಳಿಯ ಹಾಳೆ ನಮ್ಮ ಬದುಕು

ಈ ನಮ್ಮ ಬಾಳ ಪಯಣದಲಿ 

ನಿನ್ನ ಆಗಮನ ತುಂಬಿತು 

ಕಾಮನ ಬಿಲ್ಲಿನ ಬಣ್ಣಗಳ,

ಖಾಲಿ ಗೋಡೆಯ ಮೇಲೆ 

ನೀ ಬರೆದ ಬಣ್ಣದ ಚಿತ್ತಾರ 

ತುಂಬಿದೆ ಹಲವಾರು ನೆನಪುಗಳ,

ಕುರುಡು ಹೃದಯಕ್ಕೂ ಮುದ 

ನೀಡಿಹುದು ಈ ನಿನ್ನ ಬಣ್ಣಬಣ್ಣದ 

ಮುದ್ದಾದ ಸವಿ ಮಾತುಗಳು 

ಯಾವುದೇ ಬಣ್ಣ ಇಲ್ಲದ 

ಈ ಜಗವನು ನೀನು  

ಜನಿಸಿ ಸಿಂಗಾರ ಮಾಡಿ

ಬಣ್ಣಬಣ್ಣದ ಲೋಕ ಸೃಷ್ಟಿಸಿದೆ

ತನುವಿನ ಆಗಮನದಲಿ

ಮಿಡಿಯಿತು ಮನದ ಮಾತೃತ್ವದ 

ಒಲವಿನ ಬಣ್ಣದೋಕುಳಿ 

ಆಸ್ಮಿತೆಯ ಜಗದಲಿ 

ತರಹೇವಾರಿ ಬಣ್ಣ ಬಳೆದವಳು 

ನಮ್ಮ ಮುದ್ದಿನ ಮಗಳು



Rate this content
Log in

Similar kannada poem from Classics