STORYMIRROR

Shilpashree NP

Comedy Classics Fantasy

3  

Shilpashree NP

Comedy Classics Fantasy

ಅಪ್ಪ ಅಪ್ಪ.

ಅಪ್ಪ ಅಪ್ಪ.

1 min
163

ಅಪ್ಪ ಅಪ್ಪ ಕರೋನ ಬಂತು ನೋಡಪ್ಪ. 

ಹೊರಗಡೆ ಹೋಗೋ ಆಗಿಲ್ಲಪ್ಪ 

ಆಟ-ಪಾಠ ಊಟ ಎಲ್ಲವೂ ಮನೆಯ ಒಳಗೆ ಈಗ

ಅಪ್ಪ ಕಲಿಸಿದ ನನಗೆ ಚಿತ್ರ ಬಿಡಿಸುವುದನ್ನು,

ಹಾಡು ಹೇಳುವುದನ್ನು ,

ಅಪ್ಪನ ಜೊತೆಗೆ ಅಡುಗೆಯ ಮಾಡಿ ರುಚಿಯಾದ

ಊಟವ ಸವಿದೆವು. 

ದಿನವೂ ಹೊಸ ಹೊಸ ಕಥೆಯನ್ನು ಹೇಳುವ ನನ್ನಪ್ಪ.


ಅಪ್ಪ ಅಪ್ಪ ಕರೋನ ಬಂತು ನೋಡಪ್ಪ 

ಅತ್ತರೆ ಅಪ್ಪನು ಮೊದಲು ಓಡಿಬರುವನು. 

ಪ್ರವಾಸ ಎಲ್ಲಾ ಬಂದಾಯ್ತು, 

ಮನೆಯಲಿ ಸುಮ್ಮನೆ ಕೂತ್ ಆಯ್ತು,

ಅಪ್ಪನ ಜೊತೆ ಹರಟೆ ಹೊಡೆದು, 

ಜಗಳ ಕೂಡ ಮಾಡಿದ್ದಾಯ್ತು. 

ಅಪ್ಪನೂ ಆದನು ಶಿಕ್ಷಕ. ಅವನೇ ನನ್ನ ರಕ್ಷಕನೂ.

ಟಿವಿ ಮೊಬೈಲ್ ಬೇಡ ಎಂದು ಬುದ್ಧಿ ಹೇಳುವ ನನ್ನಪ್ಪ. 



Rate this content
Log in

Similar kannada poem from Comedy