ಕಾಣೆಯಾಗಿದ್ದಾಳೆ
ಕಾಣೆಯಾಗಿದ್ದಾಳೆ


ಮೊನ್ನೆ ಮೊನ್ನೆವರೆಗೂ ನಮ್ಮ ಮನೆಗಳಲ್ಲೇ ಇದ್ದಳು,
ನಡೆಯಲಿ ನಯ-ನಾಜೂಕು,
ನುಡಿಯಲಿ ಶುಧ್ಧತೆ-ಸಹಜತೆ,
ಉಡುಗೆಯಲಿ ಸರಳ-ಸುಂದರವಾಗಿದ್ದ
ಅವಳ ಮುಗ್ಧತೆ ಮನೆಯನ್ನು ನಗಿಸುತಿತ್ತು,
ನಾಚಿಕೆಗೆ ವಯಸಿನ ಕಟ್ಟಳೆ ಇಲ್ಲವೆಂದು
ಅವಳ ನೋಡಿದರೆ ಅರಿವಾಗುತಿತ್ತು.
ಅವಳ ಸಹನೆ ಮನೆಯ ಒಂದುಗೂಡಿಸುತಿತ್ತು,
ಅವಳ ಜಾಣತನ ಮನೆಯ ಬೆಳಗುತಿತ್ತು....
ಅವಳು ಕಾಣೆಯಾಗಿದ್ದಾಳೆ....
ಅಂಕು-ಡೊಂಕಾಗಿ ನಡೆವುದೇ ನಡೆಯಂದುಕೊಂಡಿದ್ದಾಳೆ,
ನುಡಿಯಲಿ ಅಪಭ್ರಂಶಗಳೇ-ಅಶ್ಲೀಲಗಳೆ ಚೆಂದವೆಂದುಕೊಂಡಿದ್ದಾಳೆ,
ಉಡುಗೆಯಲಿ ಮೈಮಾಟಗಳ ಪ್ರದರ್ಶನವೇ ಜನ್ಮ ಸಿಧ್ಧ ಹಕ್ಕು ಎಂದುಕೊಂಡಿದ್ದಾಳೆ,
ಮುಗ್ಧತೆ ಎಂದರೆ ಮಾನ ನಷ್ಟಯೆಂದು ಭ್ರಮಿಸಿದ್ದಾಳೆ,
ನಾಚಿಕೆಯೆಲ್ಲ ಊರಿಂದಾಚೆಗೆ ಒಗೆದಿದ್ದಾಳೆ,
ಸಹನೆಯ ಮರೆತು ಸಮಾನತೆಯ ಮತ್ತಿನಲಿ ತೇಲುತ್ತಿದ್ದಾಳೆ,
ಜಾಣತನವೆಂದರೆ ಜೀವನಗಳ ಜೊತೆ ಆಟವೆಂದು ಬೀಗುತ್ತಿದ್ದಾಳೆ,
ನನ್ನ ಮನೆಯ ಮುದ್ದು ಮಗಳು ಕಾಣೆಯಾಗಿದ್ದಾಳೆ.