STORYMIRROR

Ranjitha Ranju

Fantasy Inspirational Others

4  

Ranjitha Ranju

Fantasy Inspirational Others

ಹಿತವೆಂದರೆ

ಹಿತವೆಂದರೆ

1 min
718


ಮುಂಜಾವಿನ ಮಂಜಿಗೆ ಮೈಯೊಡ್ಡಿ

ಬೆಳಗುವ ಭಾಸ್ಕರನಿಗೆ ವಂದಿಸಿದರದೇನು ಹಿತ....

ಊರಿಗೆಲ್ಲಾ ಕೇಳುವಂತೆ

ಹಲ್ಲು ತಿಕ್ಕಿ ಮುದದಿಂದ

ಮಜ್ಜನಗೈದರದೇನು ಹಿತ....

ಪತ್ರಿಕೆಯ ಪುಟ ತಿರುವಿ

ಪಟ್ಟಾಗಿ ತಿಂಡಿಯ ತಿಂದರದೇನು ಹಿತ.....

ಗೆಳೆಯರ ಯೋಗ-ಕ್ಷೇಮ ವಿಚಾರಿಸಿ

ಭಾರೀ ಭೋಜನದೊಂದಿಗೆ

ಅರ್ಥವಿಲ್ಲದ ಮಾತನಾಡಿಸಿ 

ನಗಿಸಿದರದೇನು ಹಿತ.....

ಇದ್ದ ಕೆಲಸ ಮುಗಿಸಿ

ಮೇಲೆದ್ದು ಚೂರು ಅಡ್ಡಾಡಿ 

ಚುರುಮುರಿಯ ಮೇಯ್ದರದೇನು ಹಿತ.......

ಮರಳಿ ಮನೆಗೆ 

ಬೆಚ್ಚಗಿನ ಉಡುಗೆ ತೊಟ್ಟು

ವರ್ಷಧಾರೆಯಲಿ ಹರುಷದಿಂದಲಿ 

ವಿಹರಿಸಿದರದೇನು ಹಿತ....

ಚುಮುಚುಮು ಚಳಿಯಲಿ

ಬಿಸಿ ಬಿಸಿ ಕಾಫಿ ಹೀರಿ

ಬಜ್ಜಿಯ ಸವಿದರದೇನು ಹಿತ.....

ಬದಿಯಲ್ಲಿ ಸಿಕ್ಕ ಪಾನಿಪುರಿ

ಅಂಗಡಿಗೆ ನುಗ್ಗಿ ಒಂದೆರಡು

ಗಂಟಲಿಗಿಳಿಸಿದರದೇನು ಹಿತ....

ವಿದಾಯದ ಬದುಕಿಗಾಗಿ ಹವಣಿಸದೆ 

ಸಂದ ಸಮಯವ ಸಂತಸದಿ

ಕಳೆವುದೇ ಹಿತ......ಬಲು ಹಿತ


Rate this content
Log in

Similar kannada poem from Fantasy