STORYMIRROR

JAISHREE HALLUR

Romance Fantasy Others

4  

JAISHREE HALLUR

Romance Fantasy Others

ರಾಧೆ!!!

ರಾಧೆ!!!

1 min
218

ಲತೆಯಂತೆ ಬಳುಕುವ ಆ... ನಿನ್ನತಿನಡುವಲಿ ಬಿಮ್ಮನೆ ಅಪ್ಪಿಕುಳಿತ

ಆ ತುಂಬುಕೊಡವಾಗಲೇ ರಾಧೆ..?


ಕಮ್ಮನೆ ಬಿರಿದ ಕುಸುಮಾಧರಗಳಿಗೆ

ವರ್ಣಲೇಪಿಸಿ , ಕದಪುಗಳ ರಂಗಿನಲಿ

ಕೆಲಕ್ಷಣವು ಓಕುಳಿಯಾಡಲೇ ರಾಧೆ.?


ಕಾಲಂದಿಗೆಯಂದಕೆ ನಾಚುತಿವೆ ಹಸಿರ

ಬಳ್ಳಿಗಳು, ಚಾಚಿ ತಾಕುತಿವೆ ಮೆಲ್ಲನೆ,

ಮಿಡಿವ ಭಾವಕೆ ಸ್ಪಂಧಿಸಲಾರೆಯಾ..?


ಹರಿವ ಪ್ರೀತಿಗೆ ಮೌನವದೇಕೆ ಗೆಳತೀ?

ಸರಿಸು ಲಜ್ಜೆಯ ಅರಸಿ ಬಂದಿಹೆ ನಾ

ಸುರಿಸು ತುಸುವೇ ಒಲವಿನೊಸಗೆಯ


ನಿಪುಣ ನಾನಲ್ಲ, ಅಮಾಯಕ ಹೌದು

ಅಂತರಂಗದಲಿ ನೆಲೆಸಿಹೆನೆಂದು ಬಲ್ಲೆ

ಒಮ್ಮೆ ತೋರು ನಿನ್ನೊಳಗಿನ ಬಿಂಬವ.


ಪಾರಿಜಾತಕೂ ಆತುರ ನಿನ್ನ ಮುಡಿಗೆ

ಏರಲು, ಬಾರಿ ಬಾರಿ ಮುತ್ತಿಡುವ ಆ

ಮುಂಗುರುಳ ಕಂಡು ಅಸೂಯೆ ನನಗೆ


ಸನಿಹದಲೊಮ್ಮೆ ಕಣ್ಣೋಟವ ಬೆರೆಸು

ಎದೆಬಡಿತ ಏರಿಳಿಯಲಿ ಕಂಪನದಿ...

ಹಾದಿಬದಿಯಲಿ ಹೂವರಳಿದಂತೆ..


ಇರೆನಿನ್ನು ನಾ ಗೆಳತಿ ನಿನ್ನಿರವ ತೊರೆದು

ಶರಣಾದೆ ಈಗಲೇ ಈ ಚೆಲುವ ರಾಶಿಗೆ

ಕಲೆತುಬಿಡು ಒಲಿದು, ಈ ರಂಗನೆದೆಯಲ್ಲಿ....❤


Rate this content
Log in

Similar kannada poem from Romance