ಪುಸ್ತಕ ಪ್ರೀತಿ
ಪುಸ್ತಕ ಪ್ರೀತಿ
ನಿನ್ನ ಕಂಡರೆ ನನಗೆ ತುಂಬಾ
ಇಷ್ಟ;
ನಿನ್ನ ಮೇಲಿನ ಪ್ರೀತಿ
ನನ್ನನ್ನು ಏಕಾಂಗಿ ಲೋಕಕ್ಕೆ ಕರೆದೊಯ್ಯುತ್ತದೆ...
ನೀನು ನಾನು ಜೊತೆಗೆ ಇದ್ದರೆ
ಸಾಕು,ನನಗೆ ಬೇಡ ಗೆಜೆಟ್ ಲೋಕ;
ನಿನ್ನಲ್ಲಿ ಅಡಗಿದ ಅದೇಷ್ಟೋ
ವಿಚಾರಗಳ ದೃಶ್ಯ ಕಣ್ಣಮುಂದೆ ಬರುವುದು...
ನಿನ್ನನ್ನು ನಾನು ಒಮ್ಮೆ
ತೆರೆದು ಒಳಹೊಕ್ಕರೆ,
ನನ್ನ ನಯನ,ಮನ ಎಲ್ಲಿಯೂ
ಅಲುಗಾಡದು....
ಎಲ್ಲರೂ ಯಾವುದೋ ಒಂದು
ವಿಚಾರಕ್ಕೆ ನನ್ನ ಕೈ ಬಿಡಬಹುದು ಆದರೆ,
ನೀನು ಮಾತ್ರ ನನ್ನ ಎಂದಿಗೂ ಬಿಡದೆ
ಇರುವೆ ನನ್ನ ಎನ್ನುವುದು ನನಗೆ ಖಾತ್ರಿ....
ಅದುವೇ ನಮ್ಮಿಬ್ಬರ ನಡುವಿನ
ಪ್ರೀತಿಯ ಬಂಧ,
ಇರಲಿ ಹೀಗೆ ನಮ್ಮಿಬ್ಬರ ಅನುಬಂಧ,
ಇರಲಿ ಹೀಗೆಯೇ ಋಣಾನುಬಂಧ....