STORYMIRROR

Vijayalaxmi C Allolli

Abstract Fantasy Others

3  

Vijayalaxmi C Allolli

Abstract Fantasy Others

ಸ್ವಾತಂತ್ರ್ಯ

ಸ್ವಾತಂತ್ರ್ಯ

1 min
170


ದಾಸ್ಯದ ಬದುಕಿನಿಂದ ಬೇಕಿದೆ ಸ್ವಾತಂತ್ರ್ಯ

ಅವಮಾನಗಳಿಂದ ಮುಕ್ತಿ ಪಡೆಯಲು ಬೇಕಿದೆ ಸ್ವಾತಂತ್ರ್ಯ

ತಮ್ಮತನವನ್ನು ವ್ಯಕ್ತಪಡಿಸಲು ಬೇಕಿದೆ ಸ್ವಾತಂತ್ರ್ಯ

ಕಂಡ ಕನಸನ್ನು ನನಸು ಮಾಡಿಕೊಳ್ಳಲು ಬೇಕಿದೆ ಸ್ವಾತಂತ್ರ್ಯ

ಅಧಿಕಾರಶಾಹಿಗಳಿಂದ ಬೇಕಿದೆ ಸ್ವಾತಂತ್ರ್ಯ

ಯೋಚನೆಗಳನ್ನು ವ್ಯಕ್ತಪಡಿಸಲು ಬೇಕಿದೆ ಸ್ವಾತಂತ್ರ್ಯ |

ಆಗದಿರಲಿ ದುರುಪಯೋಗ ಕೊಟ್ಟ ಸ್ವಾತಂತ್ರ್ಯದಿಂದ

ಅವಮಾನಿಸದಿರಿ ಸ್ವಾತಂತ್ರ್ಯವಿದೆ ಎಂದು

ಇನ್ನೊಬ್ಬರಿಗೂ ಗೌರವ ನೀಡಿ

ನಿಮ್ಮತನ ಎನ್ನುವುದು ಅಹಂ ಆಗದಿರಲಿ ಸಿಕ್ಕ ಸ್ವಾತಂತ್ರ್ಯದಿಂದ

ಯೋಚನೆಗಳು ದುರ್ಬಳಕೆ ಆಗದಿರಲಿ ಸಿಕ್ಕ ಸ್ವಾತಂತ್ರ್ಯದಿಂದ

ಎಲ್ಲರೂ ಜೊತೆಗೂಡಿ,ಸಾಗುತ್ತಿರಬೇಕು ಸ್ವಾತಂತ್ರ್ಯ ಸಿಕ್ಕಾಗ...


Rate this content
Log in

Similar kannada poem from Abstract