ಅಮ್ಮ
ಅಮ್ಮ
ಔದಾರ್ಯತೆಯ ಖಣಿಜ
ನೀನಮ್ಮ,
ಹಸಿದವರ ಹಸಿವು ಇಂಗಿಸಿದ
ಅನ್ನಪೂರ್ಣಮ್ಮ...
ಅಆಇಈ ಕಲಿಯಲಿಲ್ಲ
ನೀನಮ್ಮ,
ಜ್ಞಾನದ ಆಗರವೇ
ನಿನಾಗಿದ್ದೆ ಅಮ್ಮ....
ತಿಳುವಳಿಕೆ ತುಂಬಿದ
ಕೊಡದಂತೆ ನೀನಮ್ಮ,
ನಿನ್ನನ್ನೇ ಅನ್ವಯಿಸಲು
ಪ್ರಯತ್ನ ಪಡುವೆವಮ್ಮ...
✍️ ವಿಜಯಲಕ್ಷ್ಮಿ ಅಳ್ಳೊಳ್ಳಿ
