Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Prabhakar Tamragouri

Classics Inspirational Others

4.5  

Prabhakar Tamragouri

Classics Inspirational Others

ನೆನಪುಗಳೊಂದಿಗೆ

ನೆನಪುಗಳೊಂದಿಗೆ

1 min
342



ಮೌನ ಮೆರವಣಿಗೆ ನಡೆದಿದೆ

ರಥೋತ್ಸವದಲ್ಲಿ

ರಂಗುರಂಗಿನ ಕನಸುಗಳ ಹೊತ್ತು.

ನೆನಪುಗಳ ಅನಾವರಣ

ಕಹಿ ಮರೆವಿನ ಪಲಾಯನ !


ಉಳಿದು ಹೋಗಿದೆ ನೆನಪುಗಳು

ಎಂದೆಂದಿಗೂ ಕರಗದಂತೆ

" ತಿಮ್ಮಪ್ಪನ " ಐಶ್ವರ್ಯದಂತೆ

ಬಳಸಿದಷ್ಟೊ ,

ಕರಗಿಸಿದಷ್ಟೊ ,

ಎಂದೆಂದಿಗೂ ಮುಗಿಯದಂತೆ!


ನೆನಪಿನ ಹನಿಗಳು ಜಾರುತಿದೆ

ಬಿಸಿಬಿಸಿಯಾಗಿ ಕೆನ್ನೆಗಳ ಮೇಲೆ.

ಜಾರಿದರೂ ಉಳಿಸಿ ಹೋಗಿವೆ

ನೆನಪಿನ ಚಿತ್ತಾರವನ್ನು. 

ನೆನಪುಗಳೇ ಹಾಗೆ

ಮರೆಯಬೇಕೆಂದರೂ ,

ಮರೆಯಲಾಗದ , ಹಳೆಯದಾದಷ್ಟೊ

ನೆನಪುಗಳು ಮತ್ತೆ ಮತ್ತೆ ಕಾಡುತ್ತವೆ!


ಜೀವದೊಡನೆ ಬೆಸೆದಿರುವ,

ಆತ್ಮದಂತೆ ಹೃದಯದೊಳಗೇ

ಬೆಚ್ಚಗೆ ಮುದುಡಿ ಮಲಗಿದೆ ನೆನಪುಗಳು.

ಆದರೂ,

ನನಗೆ ಭಯ

ರೆಕ್ಕೆ ಪುಕ್ಕ ಬಲಿತೊಡನೆ

ಗೂಡುಬಿಟ್ಟು ಹಾರಿಹೋಗುವ

ಪುಟ್ಟ ಹಕ್ಕಿಯಂತಾದರೆ ?



Rate this content
Log in

Similar kannada poem from Classics