STORYMIRROR

Prabhakar Tamragouri

Classics Inspirational Others

4  

Prabhakar Tamragouri

Classics Inspirational Others

ಬಾಂಧವ್ಯ

ಬಾಂಧವ್ಯ

1 min
370


ಬಿಡಿಸಲಾರದ , ಬಿಡಿಸಲಾಗದ 

ಈ ಬಂಧ ಬಿಡಿಸಲು 

ಸಿಕ್ಕು ಮತ್ತೆ ಸುತ್ತುವ ಅನುಬಂಧ 

ಏನೀ ಸೆಳೆತ !

ಇದೆಂತಹ ತುಡಿತ 

ಯಾರಿಗಾಗಿ ? ಯಾಕಾಗಿ ?

ಈ ತೊಳಲಾಟ ಪರಿತಾಪ ?


ಚೈತ್ರದಲಿ ಮರ ಚಿಗುರಿ ಚಿಗುರಿ 

ಕಾಯಾಗಿ ಹಣ್ಣಾಗಿ 

ರೆಂಭೆ ಕೊಂಬೆಗಳು 

ದೂರ ದೂರಕ್ಕೆ ಚಾಚಿದರೂ 

ಬೇರು ಇರುವುದು ಬುಡದಲ್ಲೇ 

ತಾಯಿ ಬೇರು ಜೀವಂತವಿದ್ದರೆ ತಾನೇ 

ಪ್ರತಿಫಲ ?! 


ಶಿಖರ ತುದಿ ಏರಿದರೂ 

ಸಾಗರದಾಚೆ ಕೈ ಚಾಚಿದರೂ 

ಬೇರು ತನ್ನ ಕಬಂಧ ಬಾಹು ಚಾಚಿ 

ತನ್ನತ್ತ ಸೆಳೆಯುತ್ತದೆ 

ತನ್ನಿರುವು ತೋರುತ್ತದೆ 

ಮರಕ್ಕೆ ಮೂಲ ಬೇರು 

ಮನುಜರ ಬೇರು ತವರು 

ತವರಿನ ಋಣವ ತೀರಿಸಲಾದೀತೇ ?!

ಬೇರಿನ ಬಾಂಧವ್ಯಕ್ಕೆ ಸಮವುಂಟೇ ?

ಕೋಟಿ ಕೋಟಿ ಹಣ ಸುರಿದರೂ 

ಬೇರು ಬಾಂಧವ್ಯ ಬಿಡಿಸಲಾರದ ನಂಟು .



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics