ಮುಖವಾಡ
ಮುಖವಾಡ
1 min
374
ಬೇಡ ಬೇಡ
ಧರಿಸಬೇಡ ನೀ ಮುಖವಾಡ
ಅಂಜದಿರು
ಸತ್ಯಸಂಧನಾಗಿರು ...
ಎಂದಾದರೂ..ನಡೆವುದು ಪವಾಡ...
ಅಧಿಕಾರದ ಆಸೆಯಲಿ
ಅಂಧನಾಗದಿರು
ಶ್ರೀಮಂತನಾಗುವ ಭರದಲಿ
ಮೂಢನಾಗದಿರು....
ಮಾತಿನ ದಾಟಿಯಲಿರಲಿ
ಒಂದೇ ತೆರವು....
ಇಂದಲ್ಲ ನಾಳೆ
ಇದೇ ಸತ್ಯಕೇ....ಗೆಲುವು....
ಹೂ ಹಾಸಿಗೆಯ ದಾರಿಯೆಂದು
ಭ್ರಷ್ಟನಾಗದಿರು
ಕಲ್ಲು ಮುಳ್ಳುಗಳ ಹಾದಿಯೆಂದು
ಶಿಷ್ಟತನವ ನೀ ಮರೆಯದಿರು....
ಸತ್ಯದ ದಾರಿಯಲೇ
ನೀ...ನಡೆಯುತಿರು.......!!!!!!!