STORYMIRROR

Kavya Poojary

Tragedy Classics Inspirational

4  

Kavya Poojary

Tragedy Classics Inspirational

ಮುರಿದ ಮನ

ಮುರಿದ ಮನ

1 min
429

ಸಾಲು ಸಾಲಾಗಿ ಎದುರಿರುವಷ್ಟೂ ಪ್ರಶ್ನೆಗಳಿಗೂ

ಹುಡುಕಿರುವೆ ಉತ್ತರವ ನಾ ಒಂದೊಂದಾಗಿ

ನನಗಿಷ್ಟವೆಂದು ಪುಸ್ತಕವೊಂದನು ಎತ್ತಿಟ್ಟಿದ್ದೆ

ಇಂದು ಕೈಗೆತ್ತಿಕೊಂಡು ನೋಡಿದರೆ 

ನೆಲಕ್ಕುರುಳಿದೆ ಪುಟಗಳು ನಾನಿಷ್ಟವಿಲ್ಲವೇನೋ ಎಂಬಂತೆ..

ಬರೆದು ಅಳಿಸಿ ಮತ್ತೇ ಹುಡುಕಿದ ಅದೇ ಕವಿತೆಯ ಸಾಲು

ಕಳೆದೇ ಹೋಗಿದೆ ಅದಕೂ ಬೇಕಿಲ್ಲವಂತೆ ನನ್ನ ಭಾವನೆಯಲಿ ಪಾಲು

ಗಾಜಿನೊಳಗಡೆ ಬಂಧಿಯಾಗಿದೆ ಮೀನು

ಪಾಪ ಅದಕೂ ಅನಿಸಿರಬಹುದು 

ಇದು ಯಾವ ಜನುಮದ ಪಾಪವೋ ಏನೋ..

ಓದಿ ಮುಗಿಸಿದ ಪುಸ್ತಕವಲ್ಲ ಸ್ವಾಮೀ ಈ ಬದುಕು

ಇನ್ನೊಬ್ಬರ ಭಾವನೆಗೂ..

ಬೆಲೆಕೊಡುವುದ ಮೊದಲು ನಾವು ಕಲಿಯಬೇಕು

 ನೆನಪುಗಳು ಉರುಹೊಡೆದು ಕಲಿತ ಪದ್ಯವಲ್ಲ 

ಸಿಹಿ-ಕಹಿ ನೆನಪುಗಳ ಸುಮ್ಮನೆ ಮರೆಯುವುದು ಕೂಡ ಸಾಧ್ಯವಿಲ್ಲ..

ದಿನಕಳೆದಂತೆ ಇಲ್ಲವಾಗಲು 

ಭಾವನೆಗಳೇನು ಅಂಗಡಿಯಲಿ ಕೊಂಡ ದಿನಸಿ ಸಾಮಾಗ್ರಿಗಳಲ್ಲ.....

ನಮ್ಮೊಂದಿಗಿನ ನಮ್ಮತನವನ್ನು ಮಾರಟಕ್ಕಿಡಲು

ನಮ್ಮತನ ಯಾರೊಬ್ಬರ ಸ್ವತ್ತಲ್ಲ......!!!!



Rate this content
Log in

Similar kannada poem from Tragedy