STORYMIRROR

Kavya Poojary

Tragedy Classics Inspirational

4  

Kavya Poojary

Tragedy Classics Inspirational

ತಂಗಾಳಿ

ತಂಗಾಳಿ

1 min
409

ಮೈ ಮನವ ಸೋಕಿ ಹೋಗಿರುವ

ತಂಗಾಳಿ ಪಿಸುಗುಟ್ಟಿದೆ ಏನನೋ....

ಒಡಲೊಳಡಗಿರುವ ತಾಪಕೆ

ತಂಪೆರೆಯ ಹೊರಟಿದೆಯೇನೊ....

ನಿರಾಶೆಯೊಂದು ಹತಾಶೆಯೊಂದಿಗೆ ಬೆರೆತು

ಕಾಣುವ ಕನಸಿಗೆ ಮುಳ್ಳಿನ ಬೇಲಿ ಕಟ್ಟಿದೆ

ಬದುಕ ಬಗೆಗೆ ಬರೆಯುವ ವಯಸ್ಸು ನನ್ನದಲ್ಲವಾದರೂ...

ಅನುಭವಕೆ ವಯಸ್ಸಿನ ಹಂಗಿಲ್ಲವಲ್ಲ

ಸುಮ್ಮ ಸಮ್ಮನೆ ಕೊರಗಿ ಕೂರುವವಳಲ್ಲ

ಬೇಸರಕೆ ನಗುವನು ಮರೆಯುವವಳೂ ನಾನಲ್ಲ...

ಅಳಲು ನೂರು ಕಾರಣವಿದ್ದರೂ...

ನಗಲೊಂದು ಕಾರಣ ಸಾಕಲ್ಲ.....

ಇರುಳ ಪರದೆಯ ಸರಿಸಿ

ಬೆಳಕಾಗಮನಕೆ ಕಾಯುತಿರುವ

ಅಕ್ಷರ ವಿಹಾರಿ ನಾನು.......!!!!



Rate this content
Log in

Similar kannada poem from Tragedy