ಧನ್ಯವಾದ
ಧನ್ಯವಾದ


ಕಂಗಳ ಕಾಂತಿ ಕಾಣದೂರಿಗೆ
ಹೊರಟಿತೇ ಕಾಲುದಾರಿಯಲಿ.
ಸೋತು ಹಿಂತಿರುಗಬಹುದೇ ಮತ್ತೇ
ಬದುಕ ಕವಲುದಾರಿಯಲಿ.
ಇಂದು ಕಗ್ಗಲ್ಲು ಎಂದೆನಿಸುವ ಸ್ಥಿತಿ,
ನಾಳೆ ಮಂಜಂತೆ ಕರಗಬಹುದು ತಾನೇ ಪರಿಸ್ಥಿತಿ.
ಪ್ರತಿಯೊಂದು ಆರಂಭಕೂ ಕೊನೆಯಿದೆ ಎಂದಾದ ಮೇಲೆ
ಕೊನೆಕಾಣಲು ಕ್ಷುಲ್ಲಕ ನೆಪವೂ ಇರಬಹುದು ತಾನೇ?
ಬಾವಿಯೊಳಗಿನ ಕಪ್ಪೆಗೂ ಇದೆ,
ತನ್ನಂತರಂಗದ ತನ್ನದೇ ಭಾವನೆ.
ಕಡೆಗೊಮ್ಮೆ ಮನ ಸೋತು ಸುಮ್ಮನಾದರೂ
ತಪ್ಪದೆನೋ ಮನಕೆ ನರಕ ಯಾತನೆ.
ತಾ ನಗುತ, ತನ್ನವರ ನಗಿಸುತ
ನಗುವ ಮನದ ಅಳುವಿನ ಗುಟ್ಟು
ತನ್ನೊಳಗೇ ಇರಲಿ ಎಂದು ಕೂತಿದೆ
ಆ ಮನ!
ನೋವಿನಲೇ ಸಂತೋಷಪಟ್ಟು
ಅರಿತು ಅರಿಯದಂತೆ,
ತಿಳಿಸಿ ತಿಳಿಸದಂತೆ
ಹಠ ಹಿಡಿದು ಕೂತಿರುವ
ಆ ಮನಕ್ಕೊಂದು ದನ್ಯವಾದ.