ಮಕ೯ಟ ಮನಸ್ಸಿನ ಸಲ್ಲದ ಬಯಕೆ
ಮಕ೯ಟ ಮನಸ್ಸಿನ ಸಲ್ಲದ ಬಯಕೆ
ಹಕ್ಕಿಗಳಂತೆ ಅಗಸದಲ್ಲಿ ಹಾರುವ ಆಸೆಯಾಗಿದೆ
ನೀನೇ ಕನಸುಗಳನ್ನು ಮಣ್ಣು ಪಾಲು ಮಾಡಿದೆ
ಹಣ ಆಮಿಷಗಳ ಹಿಂದೆಯೇ ನೀನು ಹೋದೆ
ಮಾನವೀಯತೆ ಎಲ್ಲವೂ ಮರೆಯಾಗಿದೆ
ಕವಿಯಂತೆ ಕವನ ಬರೆಯುವ ಆಸೆಯಿದೆ
ಎಲ್ಲದಕ್ಕೂ ಎಳ್ಳು ನೀರನ್ನು ನೀನು ಹಾಕಿದೆ
ಕಥೆಯನ್ನು ಬರೆಯುವಾಗ ದುಃಖ ತರಿಸಿದೆ
ನೋವಿನಲ್ಲೇ ಜೀವನವನ್ನು ನಡೆಸಿದೆ
ಎಲ್ಲಿಗೂ ಹೋಗಬೇಕು ಎಂದು ನುಡಿದಿರಿ
ಕನಸುಗಳನ್ನು ನುಚ್ಚು ನೂರು ಮಾಡಿದ್ದೀರಿ
ಸಂಬಂಧಿಕರನ್ನು ದೂರವಾಗಿ ಇಟ್ಟಿದ್ದೀರಿ
ಚುಚ್ಚು ಮಾತಿನಿಂದ ನನ್ನ ನೋಯಿಸಿದ್ದೀರಿ
ಮನಸಿಗೆ ಆದ ನೋವು ಶಾಶ್ವತವಿರುತ್ತದೆ
ಸೂತ್ರದ ಗೊಂಬೆಯಂತೆ ನನ್ನ ಬಳಸಿದೆ
ಭಾವನೆಗಳು ಎಲ್ಲವೂ ಮಾಯವಾಗಿದೆ
ಅಂದಿನ ಜೀವನವೇ ಸುಖವಾಗಿದೆ
