ಅಂತರಂಗದಲ್ಲಿ ಅಮೃತ ಸಿಂಚನ
ಅಂತರಂಗದಲ್ಲಿ ಅಮೃತ ಸಿಂಚನ
ಅಂತರಂಗದಲ್ಲಿ ಅಮೃತ ಸಿಂಚನ
ದೇವರು ಕೊಟ್ಟ ಅದ್ಭುತ ಸಂಚಲನ
ತಾಯಿಯ ಭಾಗ್ಯ ಕೊಡುವ ಮಿಲನ
ಮುದ್ದು ಮಗುವಿನ ಸೊಗಸಾದ ನಯನ
ಬಂಜೆಯಿಂದ ವಿಮುಕ್ತಿ ಅದೇನು ಇಂದು
ಕೂಸು ನೋಡಲು ಕುಟುಂಬವೇ ತಮುಂದು
ಈಗ ಯಾರು ಇಲ್ಲದೆ ಒಂಟಿಯಾಗಿ ಕುಂದು
ಕೂಸು ನೀನು ಇಲ್ಲದೆ ಜೀವನ ನುಡಿದೆ ಅಂದು
ಎಲ್ಲವೂ ಸ್ವಾರ್ಥವಾಗಿ ಬಳಸಿಕೊಂಡರು
ನನ್ನನ್ನು ನಾನೆ ಇರುವಂತೆ ಮಾಡಿಕೊಂಡರು
ನನ್ನ ಬಂಜೆ ನೀನು ಎಲ್ಲರೂ ನುಡಿದರು
ಅಜ್ಜಿ ಅತ್ತೆ ಮಾವ ನನ್ನ ದೂರ ಸಾರಿದರು
ನಾನು ನೀನು ಹೆಣ್ಣು ಎಂದು ಮರೆತಿದ್ದರು
ಅಂದು ಮನಕ್ಕೆ ಎಷ್ಟು ನೋಯಿಸಿದ್ದರು
ಮಗುವನ್ನು ಕರೆದುಕೊಂಡು ಹೋಗಿದ್ದರು
ಒಂಟಿ ನಾನು ಎಂದೂ ದೂರ ತಳ್ಳಿದರು
ವೈಷ್ಣವಿ ಸುಧೀಂದ್ರ ರಾವ್
