ಪವಿತ್ರ ಪ್ರೀತಿಯ ಬಲಿದಾನ
ಪವಿತ್ರ ಪ್ರೀತಿಯ ಬಲಿದಾನ


ಎಷ್ಟೋ ಸಂತರು, ಶರಣರು
ನೀಡಿದ ಜ್ಞಾನ ಸಾವಿರಾರು.
ಅವರ ನುಡಿಗಳನ್ನೇ ಲೆಕ್ಕಿಸರಯ್ಯಾ!
ಇನ್ನೂ ನನ್ನ ಮಾತು ಲೆಕ್ಕವೇನಯ್ಯಾ!
ಎಲ್ಲರೂ ಜ್ಞಾನಿಗಳೇ, ಮೇಧಾವಿಗಳೇ
ಎಲ್ಲವನ್ನೂ ಅರಿತ ಬುದ್ಧಿಜೀವಿಗಳೇ.
ಇವರಿಗೆ ಬುದ್ಧಿ ಹೇಳಲು ಸಾಧ್ಯವೇ!
ದೈವದ ಮಾತೂ ಲೆಕ್ಕವಿಲ್ಲ ಅಲ್ಲವೇ!
ಜಾತಿ, ಮತವೇ ಇವರಿಗೆ ಮುಖ್ಯ
ಮಾನವೀಯತೆ, ಪ್ರೀತಿಗೆ ಅಂತ್ಯ.
ನಡೆಯಿತು ಪವಿತ್ರ ಪ್ರೀತಿಯ ಬಲಿದಾನ!
ನಿಮಗೆ ಬಿಟ್ಟಿದು ಯೋಚಿಸಿ ಇದು ಸರಿಯೇನಾ?