Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Surabhi Latha

Tragedy Classics Others

4  

Surabhi Latha

Tragedy Classics Others

ಬೇವು ಬೆಲ್ಲ

ಬೇವು ಬೆಲ್ಲ

1 min
627


ಬೇವು-ಬೆಲ್ಲ 


ಹೆಣ್ಣು ಹೆಂಡತಿಯಾಗಿ, ತಾಯಾಗಿ ಮನೆಯ ದೀಪವಾದರೂ ಅವಳೆದೆಗೆ ತಂಪು ಸಿಗುವ ತಾಣ ಮಾತ್ರ ಸಾವು ಅಲ್ಲವೆ? 


ಕಷ್ಟ ಬಂದಾಗಲೂ ಹೆಣ್ಣನ್ನು ದೂರುವರು 

" ನಿನ್ನ ಕಟ್ಟಿಕೊಂಡು ನನಗೀಕಷ್ಟ " ಎಂದು. 


ಕಷ್ಟದಲ್ಲಿ ತನ್ನ ಆಸೆಗಳನ್ನು, ಕನಸುಗಳನ್ನು ಕೊಂದು ಅನುಸರಿಸಿ ನಡೆದರೂ ಅಪವಾದ ಅವಳ ಬೆನ್ನು ಬಿಡದು.


ಪುಟ್ಟ ಕಂದಮ್ಮನ ನಗುಮುಖದಲ್ಲಿ ನೋವ ಮರೆವಳು. 


ದೊಡ್ಡವರಾದ ಮೇಲೂ ಸಣ್ಣ ತಪ್ಪಿಗೆ ಮತ್ತೆ ಕಹಿಯ ನುಡಿಯ ಕೇಳದಾಗುವಳು. 


" ನಿನ್ನಿಂದಲೇ ಮಕ್ಕಳು ಹಾಳಾಗಿದ್ದು" ಎಂದು 

ಮಕ್ಕಳು ಹೆರುವುದಷ್ಟಕ್ಕೆ ಅವಳ ಅಧಿಕಾರ, ನಂತರದಲ್ಲಿ ಮಕ್ಕಳ ಹಕ್ಕು ಗಂಡಸಿಗೆ ಉಳಿವುದು? 


ತನ್ನ ಮಕ್ಖಳಿಗೆ ಕೊಂಚ ನೋವಾದರೂ ಎದೆ ಬಿರಿಯುವಂತೆ ಚೀರುವುದು ಅವಳ ಒಡಲು,


ತಪ್ಪು ದಾರಿಯ ಹಿಡಿಯ ಬೇಕೆಂದು ಅವಳಿಗೇನು ಆಸೆಯೇ? 


ತಂದೆಗೆ ಮಗನ ಭವಿಷ್ಯದ ಚಿಂತೆ ಆದರೆ,ತಾಯಿಗೆ ಮಗನ ಆರೋಗ್ಯ ದ ಚಿಂತೆ. 


ದಂಡಿಸೇ ತಿದ್ದಬೇಕು ಎಂದು ಹೊರಟಾಗಲೇ ಅಡ್ಡ ದಾರಿಯ ಗಮನ ಮಕ್ಕಳಿಗೆ , 


ಕಷ್ಟ ಸುಖದ ಪರಿಚಯ ಸಮಯಕ್ಕೆ ಸರಿಯಾಗಿ ವಿವರಿಸಲು ಮಕ್ಕಳಿಗೂ ಅದರ ಅರಿವಿನ ಸುಳಿವು ಸಿಗುವುದು ನಿಶ್ಚಿತ. 


ಮನೆಯೇ ಮಂತ್ರಾಲಯ ಎಂದಾಗ ಗಂಡನ ಅರ್ಧಾಂಗಿ ಹೆಂಡತಿ. ಗಂಡಿನ ನಿರ್ಣಯ ದಲ್ಲಿ ಅವಳಿಗೂ ಸಮಪಾಲು ಅವಶ್ಯಕ. 


" ಲೋಕ ಜ್ಞಾನ ಇಲ್ಲ ನಿನಗೆ " ಎನ್ನುವ ಮಾತು ಸರ್ವೇ ಸಾಮಾನ್ಯ. 


ಗಂಡನ ಜೊತೆ ಜೊತೆ ಕಷ್ಟ ದಲ್ಲಿ ಭಾಗಿಯಾದಾಗ ಇರದ ಈ ಜ್ಞಾನ ಈಗೇಕೆ ಬೇಕು? 


ಒಂಬತ್ತು ತಿಂಗಳು ಒಡಲೊಳಗೆ ಅವಿತಿಟ್ಟ ಕಂದನ ಹೊರ ಪ್ರಪಂಚ ಕ್ಕೆ ತೋರಗೊಡುವ ಸಮಯದಿ ಸಾವಿನ ಅಂಚಿನ ವರೆಗೂ ಹೋಗಿ ಬರುವಾಗ ಇರದ ಈ ಜ್ಞಾನ ಈಗೇಕೆ ಬೇಕು? 


ದುಡಿದು ತಂದು ಹೆಂಡತಿ ಮಕ್ಕಳನು ಸಾಕುವ ಪುರುಷ ,ಹೆಂಡತಿಯು ಮನೆಯೊಳಗಿನ, ಮನದೊಳಗಿನ ಸಾವಿರ ನೋವು ಅರಿಯದೇ ಹೋದಾಗ ನೊಂದರೂ ಎದೆಯೊಳಗೆ ಅವಿತಿಟ್ಟು ನಗುವ ಮುಖವಾಡ ಹಾಕುವಾಗ ಇರದ ಜ್ಞಾನ ಈಗೇಕೆ ಬೇಕು? 


ಸಂಸಾರ ವೆಂಬ ಸಾಗರದಲ್ಲಿ ದೋಣಿ ಒಂದಿದ್ದರೆ ಸಾಲದು ನಡೆಸುವ ನಾವಿಕನೂ ಇರಬೇಕು ಆಗಷ್ಟೇ ದಡ ಸೇರಲುಸಾಧ್ಯ 


ಮಾತು ಮಾತಿಗೂ ಹೆಣ್ಣ ಹೆತ್ತವರ ಕೆಟ್ಟ ನುಡಿಯಲಿ ನಿಂದಿಸಲು 

ಪುರುಷ ನಿನಗೇನೂ ಸಿಗದು ಹೆಂಡತಿಯ ತಿರಸ್ಕಾರದ ಹೊರತು. 


ಒಲವು ನಂಬಿಕೆ ಯಲ್ಲಿ ಗೆಲ್ಲಲಾಗದ್ದು ಕೋಪ ಅಸುಯೆಗಳಲಿ ಗೆಲ್ಲಲಾಗದು. 


ಇದ್ದಾಗ ಅರಿಯದೇ ಸಾವು ಬಂದು ತಬ್ಬಿದಾಗ 

 ( ಕಳೆದು ಕೊಂಡ ಮೇಲೆ) ಅತ್ತು ಸುರಿದರೇನು? 


ಒಡೆದ ಕನ್ನಡಿ, ಕೆಟ್ಟು  ಹೋದ ಹಾಲು ಒಂದೆ , ಮತ್ತೆ ಮೊದಲಿನ ರೂಪ ಪಡೆಯದು. 


 


 


.


Rate this content
Log in

Similar kannada poem from Tragedy