ಸವೆದ ಪಾದ
ಸವೆದ ಪಾದ


ಹುಟ್ಟಿದ್ದು, ತೊಡುಗೆಯಿಲ್ಲದ ಬಡತನದಲ್ಲಿ
ನಡೆದಿದ್ದು, ಪಾದುಕವಿಲ್ಲದ ಬರಿಗಾಲಲ್ಲಿ
ಆಡಿದ್ದು, ಅದೇ ಒಂಟಿ ಬಂಡಿಗಾಡಿನಲ್ಲಿ
ತಿಂದಿದ್ದು, ಅಲ್ಲಲ್ಲಿ ಸಿಕ್ಕ ಬಿಕ್ಷಾ ಪಾತ್ರೆಯಲ್ಲಿ
ಹೊರಳಾಡಿ ನಡೆದಷ್ಟು ಹಸಿವು ಸುಸ್ತು
ಹಾದಿಯುದ್ದಕ್ಕೂ ನೋಡುವೆ ಸುತ್ತಮುತ್ತು
ಹೊಟ್ಟೆಗೆ ತುಂಬದಷ್ಟು ಸಿಗುತ್ತಿತ್ತು ತುತ್ತು
ಜೊತೆಗೆ ಕೆಲವೊಮ್ಮೆ ಮಮತೆಯ ಮುತ್ತು
ನಡೆದು ನಡೆದು, ಕಾಲ ಪಾದ ಸವೆದಿದೆ
ಮೆಟ್ಟಿಲ್ಲದ ಬರಿಗಾಲಲಿ ದೂಳೆಲ್ಲಾ ಹರಡಿದೆ
ಕೈ ಚೀಲ ಹೊತ್ತ ಕಂದನ ಮನವು ತಣಿಸಿದೆ
ಆದರೂ ಜೀವದಲ್ಲಿನ ಉದರ ಇನ್ನೂ ಹಸಿದಿದೆ
ಒಂದಿಷ್ಟು ಸಿಗಬಹುದೇ ಎಂದು ಕಣ್ಣು ಸುತ್ತ
ಬಿಟ್ಟಿಲ್ಲ ಸ್ವಾರ್ಥ ಭಾವನೆಯು, ಮನದ ಚಿತ್ತ
ಸಿರಿವಂತರ ನೋಟ, ಇನ್ನೂ ತೆರೆದಿಲ್ಲ ಇತ್ತ
ತೆರೆದಿದ್ದರೆ, ನಾವೆಲ್ಲ ಒಮ್ಮೆ ಹಸಿವು ಮುಕ್ತ