ಪ್ರವಾಹ
ಪ್ರವಾಹ
ಎಡೆಬಿಡದೆ ಸುರಿಯುವ ಮಳೆ
ರಭಸದಿ ಮೈಮರೆತು ಹರಿಯುತ್ತಿದೆ ಹೊಳೆ
ಎಲ್ಲಿ ನೋಡಿದರಲ್ಲಿ ಕಾಣುವುದು ಬರೀ ನೀರು
ನೀರಿನ ರಭಸಕ್ಕೆ ಕಣ್ಮರೆಯಾದವು ಅದೆಷ್ಟೋ ಸೂರು
ಬೆಳೆಗಾರ ಬೆಳೆದಿರುವ ಬೆಳೆ
ಸಂಪೂರ್ಣ ನಾಶಮಾಡಿತು ಈ ರಣ ಮಳೆ
ಮಳೆ ನೀನು ಮಿತವಾಗಿ ಸುರಿದರೆ ಊರಿಗೆ ಹಬ್ಬ
ಮಳೆ ನೀ ಮಿತಿಮೀರಿ ಸುರಿದರೆ ಅಬ್ಬಬ್ಬಾ
ಪ್ರವಾಹದ ರಭಸಕ್ಕೆ ಕಣ್ಮರೆಯಾದವು ಜೀವ ಜೀವನ
ಜೀವದ ಸೆಲೆ ಬತ್ತುತ್ತಿದೆ ಈಗ ಕ್ಷಣ ಕ್ಷಣ
ನಿನ್ನ ಕೋಪಕ್ಕೆ ಬಾಡಿದ ಬದುಕೇ ಸುಮಾರು
ಇನ್ನಾದರೂ ಶಾಂತವಾಗಿ ಸುರಿ ಮುಂಗಾರು
ಬಿರುಗಾಳಿಯ ರಭಸಕ್ಕೆ ಹಾರಿ ಹೋಯ್ತು ಕನಸ್ಸಿನ ಅರಮನೆ
ಮುಗಿಲುಮುಟ್ಟಿದೆ ವೇದನೆ ಯಾತನೆ
ನೀನು ಖಾದ ಇಳೆಯ ಮನವ ತಂಪಾಗಿಸಿದೆ
ಆದರೆ ನೀನು ಜೋರಾಗಿ ಸುರಿದು ಬಾಳ ಬಹಳ ನೋಯಿಸಿದೆ