ಅಂತರಂಗವನ್ನು ಕಂಡುಕೊಂಡಾಗ
ಅಂತರಂಗವನ್ನು ಕಂಡುಕೊಂಡಾಗ
ಅಂತರಂಗವನ್ನು ಕಂಡುಕೊಂಡಾಗ,
ನಿನ್ನಲ್ಲಿರೋ ಕೋಪವನ್ನು ತೊರೆಯುತ್ತೀಯ.
ನೀನೊಬ್ಬ ಶಾಂತ ಮೂರುತಿ ಆಗುತ್ತಿಯ.
ಅಂತರಂಗವನ್ನು ಕಂಡುಕೊಂಡಾಗ,
ನಿನ್ನಲ್ಲಿರೋ ದ್ವೇಷವು ಸಾಯುತ್ತದೆ.
ನಿನ್ನಲ್ಲಿರೋ ಪ್ರೀತಿಯು ಜನಿಸುತ್ತದೆ.
ಅಂತರಂಗವನ್ನು ಕಂಡುಕೊಂಡಾಗ,
ನಿನ್ನಲ್ಲಿರೋ ಚಿಂತೆಯನ್ನು ತೊರೆಯುತ್ತೀಯ.
ನೀನೊಬ್ಬ ನೆಮ್ಮದಿಯ ಸಾರಥಿ ಆಗುತ್ತಿಯ.
ಅಂತರಂಗವನ್ನು ಕಂಡುಕೊಂಡಾಗ,
ನಿನ್ನಲ್ಲಿರೋ ರಾಕ್ಷಸತ್ವ ಸಾಯುತ್ತದೆ.
ನಿನ್ನಲ್ಲಿರೋ ಮಾನವತ್ವ (ದೈವತ್ವ) ಜನಿಸುತ್ತದೆ.
ಅಂತರಂಗವನ್ನು ಕಂಡುಕೊಂಡಾಗ ಮಾತ್ರ
ಬದುಕಿನ ಅರಿವು ನಿನಗಾಗುವುದು.