ಪಟಾಕಿಯಂತೆ.
ಪಟಾಕಿಯಂತೆ.
ಕೈ ಜೋಡಿಸಿದಷ್ಟು
ಮೈ ಮನಸುಗಳು
ಒಂದಾದಂತೆ ನಟಿಸುತಿವೆ.
ಸ್ವಾತಂತ್ರ್ಯದ ಕಿಡಿ ಪಟಾಕಿಯಂತೆ
ಪಟಪಟ ಸದ್ದನು ಮಾಡುತಿದೆ.
ಎಲ್ಲರ ಚಿತ್ತಗಳಿದ್ದವು
ದೇಶದ ಉಳಿವಿನತ್ತ
ಹಸಿವ ಮರೆತು,ಮರೆದ ಹೊತ್ತು
ಗುಂಡು ಪಟಾಕಿಗಳಿಗೆಲ್ಲವು
ನೆತ್ತರಕೊಡಿಯ ಹರಿಸಿದ್ದವು
ಜಾತಿ,ಧರ್ಮದ ಎಲ್ಲೆ ಮೀರಿ
ಭಾರತಾಂಭೆಯೊಂದೆ ಎನಿಸಿತ್ತು
ಹಗಲು ಕಳೆದು ಇರುಳು ಬಂದರೂ
ಕನಸ ನನಸು ಮಾಡಲು ಹವಣಿಸಿದ್ದವು
ಕೆಂಪುಮೋತಿ ತಿವಿದು ಹೊಂಟವರು
ಸತ್ಯಾಗ್ರಹದ ಕಹಳೆ ಉದಿದವರು
ಭಾರತ ಮಾತಾ ಕೀ ಜೈ ಎಂದರು