ಬಾಲೆಯ ಹೂಮಾಲೆ
ಬಾಲೆಯ ಹೂಮಾಲೆ
ಹೂವ ತರುವಳು ಪೂಜೆಗೆಂದು
ದೇವರೊಲುಮೆಯ ಕೃಪೆಗೆಂದು
ಹಾರವ ಮಾಡುತ ಕರವ ಮುಗಿಯುತ
ದೇವರ ನಾಮವ ಹರುಷದಿ ಹಾಡುತ
ಹೂವನು ಮಾರುವಳುಹೊಟ್ಟೆಪಾಡಗೆಂದು
ಬಣ್ಣದ ಚೆಂದದ ಹಾರವ ಮಾರಲೆಂದು
ಹೂವಿನಷ್ಟು ಮೃದು ಇವಳ ಮನಸ್ಸು
ನಳನಳಿಸುವದು ಇವಳ ಕನಸು
ಹಬ್ಬಹರಿದಿನಕೆ ಬೇಕು ಇವಳ ಹೂ
ಜೀವನದ ಶುಭಾಶುಭಕೂ ಬೇಕು ಹೂ
ನಸುಕಿನ ಬಂಗಾರ ಎಳೆಯ ರಶ್ಮಿಯಲಿ
ಘಮ್ಮನೆ ಸುಘಂಧ ಸುವಾಹಸನೆಯಲಿ
ಕಾಡು ಅಲೆದು ಹೂಗಳ ಆಯ್ದು
ಬೆಳಗೆ ಅಲೆದಾಡಿ ಮನೆಯ ತೊರೆದು
ನಿತ್ಯದಲಿ ಮಾರಾಟ ದೇವಾಸ್ಥಾನದಲಿ
ಕೂಡಿಡುವಳು ಹಣ ನಿತ್ಯದಲಿ
ಎಳೆಯ ಪುಟ್ಟಿಗೆ ಬಿದ್ದಿತು ಹೊಣೆಯು
ತಮ್ಮತಂಗಿ ಬೆಳಿಸುವ ಜವಾಬ್ದಾರಿಯು
ಮುಗ್ದ ಬಾಲೆಯ ನೋಡುತ ಮನವು
ಕಲಕಿತು ಹೃದಯ ಭಾಷೆಯ ನೋವು