STORYMIRROR

Kavya Poojary

Classics Inspirational Others

4  

Kavya Poojary

Classics Inspirational Others

ಯಾರಿಗೆ ಬಂತು ಸ್ವಾತಂತ್ರ್ಯ

ಯಾರಿಗೆ ಬಂತು ಸ್ವಾತಂತ್ರ್ಯ

1 min
413


ಪ್ರಶ್ನೆಯೊಂದು ನನ್ನದು 

ಯಾರಿಗೆ ಬಂತು ಸ್ವಾತಂತ್ರ್ಯ


ಸ್ವಾಭಿಮಾನ -ಸ್ವಾವಲಂಭನೆಯ ಎಲ್ಲೆಯ ಮೀರಿ

ಜಾತಿಗಳ ಹೆಸರಲಿ ಆಡುವ ಗುದ್ದಾಟವ ನಿಲ್ಲಿಸಿ

ಕುದಿಯುವ ನೆತ್ತರನೊಮ್ಮೆ ತಣ್ಣಗಾಗಿಸಿ

ಸಾಧ್ಯವಾದರೆ ನನ್ನ ಪ್ರಶ್ನೆಗೊಮ್ಮೆ ಉತ್ತರಿಸಿ.

ನಿಜವಾಗಿಯೂ ಯಾರಿಗೆ ಬಂತು ಸ್ವಾತಂತ್ರ್ಯ.?


ನಾನೇನುವ ಆಸೆಯ ಗೂಟವ ಕಿತ್ತೆಸೆದು

ನಮ್ಮವರೆನುವ ಸಂಬಂಧಗಳ ಪಕ್ಕಕ್ಕಿಟ್ಟು

ಜೀವದ ಹಂಗ ತೊರೆದು ವೀರಯೋಧರೆಲ್ಲಾ ಹೋರಾಟಕ್ಕಿಳಿದ್ದದ್ದು

ಅದಾವ ಸ್ವಾತಂತ್ರ್ಯಕ್ಕಾಗಿ , ಉತ್ತರಿಸುವಿರಾ

ನಿಜವಾಗಿಯೂ ಯಾರಿಗೆ ಬಂತು ಸ್ವಾತಂತ್ರ್ಯ?


ಮೇಜಿನ ಅಡಿಯಲಿ ತಾಂಡವವಾಡುವ ನೋಟಿಗೆ ಬಂತೆ.

ಅತ್ಯಾಚಾರವೆಸಗುವ ಪಾಪಿ ಪುಂಡರ ಬಿಸಿ ರಕ್ತಕೆ ಬಂತೇ

ಬ್ರಷ್ಟಾಚಾರಿಗಳ ಜೇಬಿನ ಒಳ ಬಂತೇ

ಪಾಪಿಗಳ ಪಾಪಕೆ ದಾರಿಯಾಗಿ ಬಂತೇ.

ನಿಜವಾಗಿಯೂ ಯಾರಿಗೆ ಬಂತು ಸ್ವಾತಂತ್ರ್ಯ.?


ಗಂಜಿಯಿಲ್ಲದ ಹೊಟ್ಟೆಗೆ ಬರಲಿಲ್ಲ

ಕೂಲಿಯವನ ಕೈಗೆ ಕಾವಲಾಗಿ ಬರಲಿಲ್ಲ...

ನೀಯತ್ತಾಗಿ ದುಡಿಯುವವನ ದುಡಿಮೆಗೆ ಬರಲಿಲ್ಲ.

ಹೆಣ್ಣು ಎನುವ ಕುಸುಮಕೆ ದಾರಿಯಾಗಿ ಬರಲಿಲ್ಲ..

ನಿಜವಾಗಿಯೂ ಯಾರಿಗೆ ಬಂತು ಸ್ವಾತಂತ್ರ್ಯ?


ಉತ್ತರಿಸುವಿರಾ.....?



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics