STORYMIRROR

Kavya Poojary

Tragedy Inspirational Others

4  

Kavya Poojary

Tragedy Inspirational Others

ಬೇಸರ

ಬೇಸರ

1 min
506

ಮತ್ತದೇ ಬೇಸರದಲಿ ಕೂತಿರುವೆ 

ನನ್ನವರಾರಿಲ್ಲದೆ ಒಂಟಿಯಾಗಿ.....

ಸಾವಾಗದೆಯೂ ಸೂತಕ ಮನಸಿಗಂಟಿದೆ

ಉಸಿರಾಟವ ನಿಲ್ಲಿಸಿ ದೂರ ನಡೆವ ಮನಸಾಗಿದೆ...

ನೋವಿಗೆ ಹೆಗಲಾಗುವ ಜೀವವೆ

ಸಿಡುಕಿ ದೂರ ನಡೆದರೆ ಹೇಗೆ.....!

ಕಾಡಿ ಕಾಡಿ ನಗಿಸುವ ಜೀವವೆ

ಕಣ್ಣೀರಿಗೆ ಕಾರಣವಾದರೆ ಹೇಗೆ.....

ಕಳೆದ ದಿನಗಳ ನೆನೆದರೆ ಸಾಕು

ಮನ ನೆನೆದು ಕಣ್ಣೀರಿಡುವುದು...

ತಪ್ಪೇನೆಂದು ಹೇಳದೆ ಶಿಕ್ಷಿಸುವುದೆಷ್ಟು ಸರಿ...

ಸಾವಿರ ಮಾತುಗಳು ಹೇಳಲಾಗದೆ ನನ್ನೊಳಗೆ ಸತ್ತಿವೆ

ಅತ್ತೂ..ಅತ್ತೂ...ಕಣ್ಣೀರು ಕೂಡ ಬತ್ತಿದೆ....

ಅಮ್ಮನ ಮಡಿಲಲಿ ಮಗುವಾಗಿ ನಗುವ

ಆಸೆ ಬುರುಕ ಮಗಳ ಕನಸು........

ಕನಸಾಗಿಯೇ ಉಳಿಯುವ ಸೂಚನೆ ಖಚಿತವಾಗಿದೆ..

ಕೈಗೆಟಕದ ಚಂದಿರನ ಪ್ರೀತಿಯ ಪಾಲು

ಇಂದಲ್ಲ..ನಾಳೆ ನನಗೂ ಸಿಗಬಹುದೆನುವ ಆಸೆ

ನನಸಾಗದ ಕನಸ ಪೆಟ್ಟಿಗೆಯೊಳ ಸೇರಿ...

ಇನ್ನೆಂದೂ ನಾ ನಗಲಾಗದಂತೆ ಅಳಿಸಿದೆ...!



Rate this content
Log in

Similar kannada poem from Tragedy