ಬೇಸರವಿಲ್ಲ
ಬೇಸರವಿಲ್ಲ


ಯಾರ ಮೇಲೂ ಬೇಸರವಿಲ್ಲ
ಆದರೂ ಕಣ್ತುಂಬಿಕೊಂಡಿಹುದಲ್ಲ!
ಕೈಹಿಡಿದು ನಾ ಜೊತೆಯಿರುವೆ ಎಂದು
ಅಳುವ ಕಂಗಳನೊರೆಸಿದ ಕೈ
ಇಂದೇಕೋ ತುಸು ದೂರ ಸುಮ್ಮನೆ ನಿಂತಿತಲ್ಲ!
ತಪ್ಪಿಲ್ಲ, ಬೇಸರವೂ ಇಲ್ಲ.
ಆದರೂ ಮನ ಅಳುತಿಹುದಲ್ಲ?
ನನ್ನದೇ ತಪ್ಪುಗಳಿವು
ಇದಕಿಲ್ಲ ಪ್ರಾಯಶ್ಚಿತ.
ಬದಲಾವಣೆಯ ಛಾಯೆಯ
ಸಹಿಸಲು ನನಗಾಗುತ್ತಿಲ್ಲ.
ಕಣ್ಣೀರಿಡುವ ಈ ಪಾಪಿ ಮನಕೆ
ಸಾಂತ್ವನಿಸುವ ಜೊತೆ ಇಲ್ಲ.
ಅಳುವವರ ನಾ ನಗಿಸಿದೆ.
ನನ್ನವರ ಕಣ್ಹನಿಯ ನೋಡಲಾಗದೆ
ನಾ ಅತ್ತು ಕೂತೆ.
ಎಲ್ಲಾ ನೆನಪಾಗಿ ಇಂದು ಬಿಕ್ಕಳಿಸುತ್ತಿರುವೆ
ನಾ ಎಂದಿನಂತೆ ಒಂಟಿಯಾಗಿ,
ಕರುಳ ಯಾರೋ ಹಿಂಡಿ ಹಿಚುಕಿದಂತೆ
ನನಗೂ ಅರಿವಾಗದು ಯಾಕೀ ಭಾವ.
ಹೊಸತೇನಲ್ಲಾ, ಬಿಡಿ!
ದಿನ ಸಾಯುವವರಿಗೆ ಅಳುವವರಾರು?
ಪದಗಳ ಜೊತೆಗಿನ ಈ ನಂಟ ಬರೆದವರಾರು?