STORYMIRROR

Kavya Poojary

Romance Inspirational Others

4  

Kavya Poojary

Romance Inspirational Others

ಒಲವೇ

ಒಲವೇ

1 min
196

ಕತ್ತಲೂರಲಿ ಕಾಣೆಯಾಗಿರುವೆನು

ಹುಡುಕಿ ನೀ ಬರುವೆಯಾ?

ಸಂಕ ಸೇತುವೆಗಳಡಿಯಲಿ ಮರೆಯಾಗಿರುವೆನು

ಹಿಂಬಾಲಿಸದೆ ಮರೆತುಬಿಡುವೆಯಾ?


ಏನೂ ಹೇಳದೆ ಹೋದರೂ ನಾನು,

ಇನ್ನೇನು ಕೇಳದೆ ಸುಮ್ಮನಿರುವೆಯಾ ನೀನು?

ಮನೆಯ ಮಹಡಿಯ ಕಿಟಕಿಯ ತೆರೆಯದೆ

ಮನದ ಬಾಗಿಲನೂ ಮುಚ್ಚಿದೆಯಾ?


ಹಪಹಪಿಸುವ ಮನದ ಮುಂಬಾಗಿಲಲಿ

ರಂಗೋಲಿಯನಿಡದೆ ಸತಾಯಿಸ ಹೊರಟೆಯಾ?

ಹವಣಿಸುವ ಹೃದಯದ ಹಾವ ಭಾವಕೆ

ನೀರೆರಚಿ ನೀ ಹೊರಟೆಯಾ?


ಸಾಲುಗಳ ಕೊನೆಯಲಿ

ಮುಕ್ತಾಯದ ಚುಕ್ಕಿಯನಿಡುವುದ ಮರೆತೆಯಾ?

ಅಳಲಾರದೆ ಕಣ್ತುಂಬಿಕೊಂಡ ಮಗುವನು

ನಡುದಾರಿಯಲಿ ಬಿಟ್ಟು ಹೊರಟೆಯಾ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance