STORYMIRROR

Kavya Poojary

Classics Inspirational Others

4  

Kavya Poojary

Classics Inspirational Others

ಆಸೆ

ಆಸೆ

1 min
270

ಕೃಷ್ಣನ ಕೊಳಲಿನ ದನಿ ನಾನಾಗುತ

ನಿನ್ನಯ ಕರಣವ ಸೇರುವ ಆಸೆ

ತಂಗಾಳಿಯ ತಂಪು ನಾನಾಗಿ

ನಿನ್ನನು ಸ್ಪರ್ಶಿಸುವ ಆಸೆ

ಬಿಸಿಲ ಬೇಗೆಯ ನಡುವೆ ಮರ ನಾನಾಗಿ

ನಿನಗೆ ನೆರಳಾಗುವ ಆಸೆ

ಹಸಿರ ನಡುವಲಿ ಅರಳುವ ಮಲ್ಲಿಗೆ ನಾನಾಗಿ

ಮೆಲ್ಲಗೆ ನಿನ್ನಯ ಮುಡಿಸೇರುವ ಆಸೆ

ನಿನ್ನಯ ಕಾಲ್ಗೆಜ್ಜೆಯ ನಾದ ನಾನಾಗಿ

ನಿನ್ನಯ ಹೆಜ್ಜೆಯ ಲಜ್ಜೆಯಾಗುವ ಆಸೆ

ನಿನ್ನಯ ಮುಗುಳುನಗು ನಾನಾಗಿ

ನಿನ್ನ ನಗುವಿಗೆ ಕಾರಣ ನಾನಾಗುವ ಆಸೆ

ನಿನ್ನಯ ಕಣ್ಹನಿಯ ಒರೆಸುವ ಕೈ ನಾನಾಗಿ

ಕಣ್ಣ ಕಾಯುವ ಆ ರೆಪ್ಪೆಯಾಗುವ ಆಸೆ....

ನಿನ್ನಯ ಕೈ ಬಳೆಯು ನಾನಾಗಿ

ನೀ ನಡೆವದಾರಿಗೆ ಕಾವಲಾಗುವ ಆಸೆ...

ನಿನ್ನಯ ಮುಪ್ಪಿನಲಿ ಊರುಗೋಲು ನಾನಾಗಿ

ನೀ ಎಡವದಂತೆ ಜೋಪಾನ ಮಾಡುವ ಆಸೆ

ನಿನ್ನಯ ಮಗುವಾಗಿ ..ನಿನ್ನಯ ನಗುವಾಗಿ

ನಿನ್ನವಳಾಗಿಯೇ ಇರುವ ಆಸೆ !


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics