Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Prabhakar Tamragouri

Classics Inspirational Others

4  

Prabhakar Tamragouri

Classics Inspirational Others

ಎಚ್ಚರಿಕೆ

ಎಚ್ಚರಿಕೆ

1 min
351



ಹಸಿರುಟ್ಟ ಕಾನನದ 

ಕಿರು ಶಿಲೆಯ ಬಿರುಕಿನಲಿ

ಇಳಿ ಸಂಜೆಯ ಹೊಂಗಿರಣದಲಿ 

ಹರಿಯುತಿದೆ ಜೀವ ಜಲ.

ಭವಿಷ್ಯದ ಅಸಂಖ್ಯ ನಿರೀಕ್ಷೆಗಳ 

ಹೊತ್ತು ಕುಳಿತ 

ಎಳೆಯ ಕುವರಿಯರ 

ಕಣ್ಣುಗಳ ( ನಯನಗಳ ) ಗತ್ತು.


ಒರಟು ಶಿಲೆಯನ್ನೇ ಸವೆಸಿ 

ಮುಂದೆ ಮುಂದೆ ಹರಿಯುವ 

ನೀರ ಯತ್ನ ಆಗಬೇಕಿದೆ 

ಎಳೆಯರ ರಟ್ಟೆಗೆ ಬಲ!

ಬದುಕಿನ ಆಳ ಎಷ್ಟೇ ಇರಲಿ 

ಈಜು ಕಲಿತರೆ ಸಾಕು 

ಆಳಕ್ಕೆ ಇಳಿಯಬಹುದು, 

ಹೋಗಬಹುದು ಅಗಲಕ್ಕೆ! 


ಶಿಲೆಯ ಮೇಲಿನ ಬಾಲೆಯರೇ

ನೀವಿನ್ನೂ ಅರಿಯಬೇಕಿದೆ 

ಬದುಕಿನ ಆಳ , ಅಗಲ ಜೋಕೆ !

ಜಾರಿದರೆ ಅಲ್ಲಿ 

ಅಪಾಯವೂ ಉಂಟು 

ಬದುಕಿನ ಪಯಣ 

ಬಲು ದೀರ್ಘವಾದುದು. 

ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ 

ಮೇಲೇಳುವ ಮುನ್ನ 

ಒಮ್ಮೆ ಯೋಚಿಸಿ, 

ಬದುಕು ನಿಂತ ನೀರಲ್ಲ !


Rate this content
Log in

Similar kannada poem from Classics