ನಮ್ಮ ಶಿಕ್ಷಕರು
ನಮ್ಮ ಶಿಕ್ಷಕರು

1 min

706
ಕಲಿಸಿದರೆಮಗೆ ವಿದ್ಯಾ ಬುದ್ಧಿ,
ಮಾಡುವಂತೆ ಎಲ್ಲ ಕಾರ್ಯ ಸಿದ್ಧಿ.
ಕೈ ಹಿಡಿದು ನಡೆಸಿದವರು ಅವರೇ,
ಒಳಿತಿನ ದಾರಿಯಲ್ಲೆನ್ನ ನೂಕಿದವರು ಅವರೇ.
ಸರಿ ದಾರಿಯಲ್ಲಿ ನನ್ನ ನಡೆಸಿದವರು,
ಪೆಟ್ಟು ಕೊಟ್ಟು ನನ್ನನ್ನು ನೆಟ್ಟ ಮಾಡಿದವರು.
ನನ್ನ ಪ್ರತಿ ಹೆಜ್ಜೆಗಳ ಬೆನ್ನೆಲುಬಾದವರು,
ನನ್ನ ಬಾಳಲಿ ನಗುವಿನ ಛಾಯೆ ಮೂಡಿಸಿದವರು.
ಮನದಾಳದಲ್ಲಿ ಆತ್ಮ ವಿಶ್ವಾಸ ತುಂಬಿದಂತವರು,
ಜೊತೆಯಲ್ಲಿ ಆತ್ಮ ಗೌರವವನ್ನು ಕಲಿಸಿ ಕೊಟ್ಟವರು,
ಕತ್ತಲ ಜೀವನದಿ ಜ್ಯೋತಿ ಹಚ್ಚಿ ಬೆಳಗಿಸಿದವರು,
ವರ್ಣಿಸಲಾಗದ ಹಲವರು *ನಮ್ಮ ಶಿಕ್ಷಕರು*