STORYMIRROR

ಚಿರು ಕನ್ನಡಿಗ ( Chiranjeevi P)

Inspirational

3  

ಚಿರು ಕನ್ನಡಿಗ ( Chiranjeevi P)

Inspirational

ಬದಲಾವಣೆ?!!!!!

ಬದಲಾವಣೆ?!!!!!

1 min
331

ಎಲ್ಲಿದೆ ಇಲ್ಲಿ ಸಮಾನತೆ,

ಮರೆತು ಹೋಗಿದೆ ಮಾನವೀಯತೆ.

ಬೇಡಿ ತಿನ್ನುವಷ್ಟು ಇಲ್ಲಿ ಬಡತನ, 

ದುಡ್ಡಿನಲ್ಲಿಯೇ ಮನೆ ಮಾಡುವಷ್ಟು ಸಿರಿತನ.


ಎಲ್ಲಿದೆ ಇಲ್ಲಿ ಬೆಳೆದವನಿಗೆ ಬೆಲೆ?

ಆಗುತ್ತಿರುವಾಗ ನ್ಯಾಯದ ಕೊಲೆ!.

ಮನಸ್ಸಿನಲ್ಲಿ ಎಲ್ಲೆಡೆ ಕಪ್ಪು ಕಲೆ,

ಇಲ್ಲಿ ಬಡವರಿಗಿಲ್ಲದ ಶಾಶ್ವತ ನೆಲೆ. 


ಹೊಡೆದು ತಿನ್ನುವ ಹಲವರು, 

ಕಂಡು ಕಾಣದಾದರು ಕೆಲವರು. 

ಯಾರು ಇದನ್ನೆಲ್ಲ ತಿದ್ದಿ ಸಲಹುವವರು? 

ಮರೆತು ಹೋಗುತ್ತಿದೆ ಶಬ್ದ "ನಮ್ಮವರು". 


ಮನಸ್ಸಿನಲ್ಲಿ ಮೂಡಿತು ಪ್ರಶ್ನೆ ಕೊನೆಗೆ, 

ಇಲ್ಲಿ ಬೆಲೆಯಿದೆಯೇ ಬದಲಾವಣೆಗೆ? 

ಕರೆಯುವ ಒಮ್ಮೆ ಅದ ನಾವು ಕೈ ಚಾಚಿ ಇಲ್ಲಿಗೆ,

ಸ್ವಾಗತದ ತಿಲಕವಿಟ್ಟು ಒಮ್ಮೆ ಅದರ ಹಣೆಗೆ. 



Rate this content
Log in

Similar kannada poem from Inspirational