STORYMIRROR

ಚಿರು ಕನ್ನಡಿಗ ( Chiranjeevi P)

Others

2  

ಚಿರು ಕನ್ನಡಿಗ ( Chiranjeevi P)

Others

ಅಮ್ಮ

ಅಮ್ಮ

1 min
3.8K

ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತೆ,

ನೋವಿನ ಖುಷಿಯಲಿ ನನ್ನನ್ನು ಹೆತ್ತೆ.

ನನ್ನನ್ನು ತಿದ್ದಿ ಸಲಹಿದಾತೆ, ನೀನೇ

ನನ್ನಯ ನಿಜವಾದ ದೇವತೆ.


ನಿನ್ನಿಂದ ನಾ ಕಂಡೆ ಈ ಜಗವ,

ನಾ ಕಲಿತೆ ನಿನ್ನಿಂದ ಆ ನಗುವ.

ನೀನೊಂದು ರೀತಿಯ ಕನ್ನಡಿ,

ನಿನ್ನ ಕುರಿತು ಬರೆಯಲು ಕಷ್ಟ ಮುನ್ನುಡಿ.


ನಾ ಜಾರಿದೊಡೆ ನಿನ್ನ ಕಣ್ಣಲ್ಲಿ ನೀರಹನಿ,

ನಕ್ಕರೆ ನಾ ನಿನ್ನ ಬಾಯಲ್ಲಿ ಜೇನಹನಿ.

ನನ್ನ ನೋವಲಿ ನಿನ್ನ ನೋವು ಅಡಗಿದೆ

ನೀಡಿದೆ ಕಷ್ಟ ಅದನು ನಾ ಅರಿಯದೆ.


ಅಂದು ನೀ ನೀಡದಿದ್ದರೆ ಜನನ,

ನಾ ಬರೆಯುತ್ತಿರಲಿಲ್ಲ ಈ ಪುಟ್ಟ ಕವನ.

ನನ್ನ ಪ್ರತಿ ಹೆಜ್ಜೆಗು ನೀನೇ ದಾರಿ

ಇಲ್ಲದಿದ್ದರೆ ಜೀವನ ಬಲು ದುಬಾರಿ..


Rate this content
Log in