STORYMIRROR

ಚಿರು ಕನ್ನಡಿಗ ( Chiranjeevi P)

Inspirational

3  

ಚಿರು ಕನ್ನಡಿಗ ( Chiranjeevi P)

Inspirational

ಕನ್ನಡದ ಕಂಪು

ಕನ್ನಡದ ಕಂಪು

1 min
11.6K

ಹಕ್ಕಿಗಳ ಕಲರವದಿ

ಕನ್ನಡದ ಕಂಪು,

ಅದನೆನೆಯುತ್ತಲಿದ್ದೊಡೆ ನನ್ನ

ಮನವಾಗುವುದು ತಂಪು.


ಇಂಪು ಇಂಪಾಗಿರುವ ಕನ್ನಡ

ಅದ ಬಿಟ್ಟು ಏಕಯ್ಯ? ಎನ್ನಡ? ಎಕ್ಕಡ?

ನಾವಾಗಬೇಕು ಕನ್ನಡದ ಕಣ್ಮಣಿಗಳು

ನಾವು ತಾನೇ ಉಳಿಸಬೇಕು ಕನ್ನಡ ಪದಗಳು.


ತಂಪಾದ ಗಾಳಿಯಲ್ಲಿ, ಇಂಪಾದ ಇರುಳಿನಲ್ಲಿ

ಕನ್ನಡಾಂಬೆಯ ಮುದ್ದು ಕಂದನೇ..

ನಮಿಸಿ ನಲಿ ನೀ ಕನ್ನಡಾಂಬೆಗೆ

ಕನ್ನಡ ತಾಯಿ ಭುವನೇಶ್ವರಿಗೆ.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational