STORYMIRROR

ಚಿರು ಕನ್ನಡಿಗ ( Chiranjeevi P)

Abstract

2  

ಚಿರು ಕನ್ನಡಿಗ ( Chiranjeevi P)

Abstract

ಜೀವನ

ಜೀವನ

1 min
117

ಬಾಳ ಬಂಧನದಲ್ಲಿ ಅದೆಷ್ಟೋ ತಿರುವುಗಳು. 

ಒಮ್ಮೆ ಪ್ರೀತಿಯ ಝೇಂಕಾರ,

ಒಮ್ಮೆ ಭಕ್ತಿಯ ಓಂಕಾರ,

ತಾಯಿ ತಂದೆಯ ಮಮಕಾರ,

ತಿಳಿಯದೆ ಸಿಗುವ ಸಹಕಾರ. 


ಅಲ್ಲಿ! ಇಲ್ಲಿ! ಮತ್ತಿನ್ನೆಲ್ಲಿ? ಹುಡುಕಲಿ 

ಕಳೆದ ಸವಿ ಕ್ಷಣಗಳು. 

ಎಷ್ಟು ಹುಡುಕಿದರು, ಎಲ್ಲಿ ಕೆದಕಿದರು

ಸಿಗದೆ ಹೋಯಿತು ಸವಿ ಕ್ಷಣದ ಕೆಲ ಕಣಗಳು. 


ಇಲ್ಲಿ, ತಪ್ಪು ಮಾಡುವರು ಹಲವರು, 

ಶಿಕ್ಷೆ ಅನುಭವಿಸುವರು ಕೇವಲ ಕೆಲವರು. 

ಇಲ್ಲಿ, ಮೋಸ ಮಾಡುವರು ದಿನಕ್ಕೊಬ್ಬರು,

ನೋವಿನ ಬಲೆಯಲಿ ಮಾತ್ರ ಸತ್ಯವಂತರು. 


ಎಲ್ಲರ ಚಿಂತನೆ ತಮ್ಮತಮ್ಮ ಲಾಭದಾಯಕ, 

ಯಾವುದಾದರೇ ಏನು ಇಲ್ಲಿ ಮಾಡುವ ಕಾಯಕ. 

ಇಲ್ಲಿ ಎಂದಿಗೂ ಅಸಾದ್ಯ ಸಿಗಲು ಒಳ್ಳೆ ನಾಯಕ, 

ಇದೆಲ್ಲದರ ಮದ್ಯ ಸಿಲುಕಿಕೊಂಡವನೇ ಅಮಾಯಕ. 


Rate this content
Log in

Similar kannada poem from Abstract