ಸ್ವತಂತ್ರ ಭಾರತ
ಸ್ವತಂತ್ರ ಭಾರತ
ಇದು ಭಾರತ ಇದು ಭಾರತ
ಇದುವೇ ಸ್ವತಂತ್ರ ಭಾರತ
ಪರತಂತ್ರದಂಧಕಾರ ಕಳೆದು
ಸ್ವಾತಂತ್ರ್ಯದ ಬೆಳಕು ಹರಿದು
ನಳನಳಸುತಿಹ ನವಭಾರತ
ಇದುವೇ ನಮ್ಮ ಭಾರತ
ಇದು ಸ್ವತಂತ್ರ ಭಾರತ
ಶಾಂತಿ ಮಂತ್ರವ ಬಿತ್ತಿ
ಅಹಿಂಸಾಧರ್ಮವ ಮೆರೆದ
ಮಹಾತ್ಮನ ನಾಡಿದು ಭಾರತ
ಇದುವೇ ಧನ್ಯ ಭಾರತ
ಇದು ಸ್ವತಂತ್ರ ಭಾರತ
ಸ್ವಾತಂತ್ರ್ಯದ ಕಹಳೆ ಮೊಳಗಿ
ದಿಕ್ತಟಗಳಲಿ ಮಾರ್ದನಿಸಿ
ಮೇರೆ ಮೀರಿ ಬೆಳೆದು ನಿಂತ
ಇದುವೇ ಹಿರಿದು ಭಾರತ
ಇದು ಸ್ವತಂತ್ರ ಭಾರತ
ದೇಶಭಕುತರ ಮೂಳೆ
ಮಜ್ಜ ರಕುತದ ಬುನಾದಿ
ಮೇಲೆದ್ದು ನಿಂತ ಭಾರತ
ಇದುವೇ ಭವ್ಯ ಭಾರತ
ಇದು ಸ್ವತಂತ್ರ ಭಾರತ
ದಶಕಗಳೇಳು ಕಳೆದು
ಹೊಸ ಅಲೆಗಳು ತೇಲಿ ತೇಲಿ
ವಿಶ್ವಭೂಪಟದಿ ವಿರಾಜಿತ
ಇದುವೇ ನವ್ಯ ಭಾರತ
ಇದು ಸ್ವತಂತ್ರ ಭಾರತ