ಗೆಲುವು
ಗೆಲುವು


ಹೊಸ ಹಾದಿಯ ಹುಡುಕಾಟ
ಸರಿ..ಅದರಲಿ ತಪ್ಪಿಲ್ಲ
ಆದರೆ...ನೆನಪಿರಲಿ
ಒಳ್ಳೇ ತನಕೆ ಮುಪ್ಪಿಲ್ಲ...
ಬಂದದ್ದೆಲ್ಲಾ ಬರಲಿ ಎನುತ
ಸುಮ್ಮನಿದ್ದು ಬಿಡು
ನಿನ್ನತನಕೆ..ನಿನ್ನೊಳ್ಳೆತನಕೆ
ಸೋಲಿಲ್ಲ ಮರೆಯದಿರು....
ಮನವಿರಲಿ ಮಗುವಂತೆ
ಸೋತರೂ..ಇನ್ನೊಬ್ಬರನು ನಗಿಸುವಂತೆ...
ಬಾಳೊಂದು...ಆಟ
ಕಲಿಯಲೇ ಬೇಕಲ್ಲ ಹಲವು ಪಾಠ
ಒಳಿತು ಕೆಡುಕುಗಳ ನಡುವೆ
ಒಳಿತಿನ ದಾರಿಯಲಿ ನಡೆದರೆ ನೀ
ಗೆದ್ದೇ.....ಗೆಲ್ಲುವೆ.......!!!!!!